ಮಂಗಳವಾರ, ಅಕ್ಟೋಬರ್ 19, 2021
22 °C

IPL 2021 | RR vs CSK: ಚೆನ್ನೈ ವಿರುದ್ಧ ರಾಜಸ್ಥಾನ್‌ಗೆ ಭರ್ಜರಿ ಗೆಲುವು

Published:
Updated:
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
 • 11:50 pm
 • 11:50 pm

  ಅಂಕಪಟ್ಟಿ ಇಂತಿದೆ

 • 11:49 pm

  ಜೈಸ್ವಾಲ್-ದುಬೆ ಗೆಲುವಿನ ರೂವಾರಿ

 • 11:15 pm

  ರಾಜಸ್ಥಾನ್‌ಗೆ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು

  ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ (50) ಹಾಗೂ ಶಿವಂ ದುಬೆ (64*) ಬಿರುಸಿನ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

  ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ ಪ್ಲೇ-ಆಫ್ ಕನಸು ಜೀವಂತವಾಗಿದೆ. ಅತ್ತ ಋತುರಾಜ್ ಗಾಯಕವಾಡ್ ಚೊಚ್ಚಲ ಶತಕದ (101*) ಹೋರಾಟವು ವ್ಯರ್ಥವೆನಿಸಿದೆ. 

 • 11:09 pm

  ಶಿವಂ ದುಬೆ 31 ಎಸೆತಗಳಲ್ಲಿ ಚೊಚ್ಚಲ ಫಿಫ್ಟಿ ಸಾಧನೆ

 • 10:44 pm

  ರಾಜಸ್ಥಾನ್ ದಿಟ್ಟ ಉತ್ತರ

  50 ಬೆನ್ನಲ್ಲೇ ಜೈಸ್ವಾಲ್ ವಿಕೆಟ್ ನಷ್ಟವಾಯಿತು. ಬಳಿಕ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ತಂಡವನ್ನು ಮುನ್ನಡೆಸಿದರು. 10 ಓವರ್ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು. 

 • 10:13 pm

  ಎವಿನ್ ಲೂಯಿಸ್ ವಿಕೆಟ್ ಪತನ

 • 10:09 pm

  19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಜೈಸ್ವಾಲ್

  ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ್ ತಂಡಕ್ಕೆ ಓಪನರ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಎವಿನ್ ಲೂಯಿಸ್ ಬಿರುಸಿನ ಆರಂಭವೊದಗಿಸಿದರು. ಈ ಜೋಡಿಯು ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಪರಿಣಾಮ 4 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು. 

  ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೈಸ್ವಾಲ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಲೂಯಿಸ್ ವಿಕೆಟ್ ನಷ್ಟವಾಯಿತು. ಆಗಲೇ ಮೊದಲ ವಿಕೆಟ್‌ಗೆ ಜೈಸ್ವಾಲ್ ಜೊತೆಗೆ 5.2 ಓವರ್‌ಗಳಲ್ಲಿ 77 ರನ್‌ಗಳ ಜೊತೆಯಾಟ ನೀಡಿದರು. 12 ಎಸೆತಗಳನ್ನು ಎದುರಿಸಿದ ಲೂಯಿಸ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 27 ರನ್ ಗಳಿಸಿದರು. 

 • 10:04 pm

  ಧೋನಿ ಮೈಲಿಗಲ್ಲು

 • 10:03 pm

  ಗಾಯಕವಾಡ್ ಶತಕದ ಅಬ್ಬರ

 • 10:02 pm
 • 10:01 pm

  60 ಎಸೆತಗಳಲ್ಲಿ ಶತಕ ಬಾರಿಸಿದ ಗಾಯಕವಾಡ್

 • 09:24 pm

  ಗಾಯಕವಾಡ್ ಅಮೋಘ ಶತಕ

  ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ಚೊಚ್ಚಲ ಶತಕದ (101*) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 189 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. 

  ರವೀಂದ್ರ ಜಡೇಜ (32*), ಫಾಫ್ ಡು ಪ್ಲೆಸಿ (25) ಹಾಗೂ ಮೊಯಿನ್ ಅಲಿ (21) ಉಪಯುಕ್ತ ಆಟವನ್ನು ಪ್ರದರ್ಶಿಸಿದರು. ರಾಜಸ್ಥಾನ್ ಪರ ರಾಹುಲ್ ತೆವಾಟಿಯಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. 

 • 09:12 pm

  ರಾಯುಡು ವಿಕೆಟ್ ಪಡೆದ ಸಕಾರಿಯಾ

 • 08:55 pm

  ತೆವಾಟಿಯಾಗೆ ಮೂರನೇ ವಿಕೆಟ್

 • 08:52 pm

  ಋತುರಾಜ್ ಫಿಫ್ಟಿ ಆಸರೆ

  ಮಗದೊಂದು ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಋತುರಾಜ್ ಗಾಯಕವಾಡ್ ಫಿಫ್ಟಿ ಸಾಧನೆ ಮಾಡಿದರು. ಇನ್ನೊಂದೆಡೆ ಮೊಯಿನ್ ಅಲಿ (21), ರಾಹುಲ್ ತೆವಾಟಿಯಾ ದಾಳಿಯಲ್ಲೇ ಔಟ್ ಆದರು. 15 ಓವರ್ ಅಂತ್ಯಕ್ಕೆ ಚೆನ್ನೈ ಮೂರು ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತ್ತು. 

 • 08:50 pm

  ಗಾಯಕವಾಡ್ ಮಗದೊಂದು ಫಿಫ್ಟಿ ಸಾಧನೆ

 • 08:24 pm

  ಚೆನ್ನೈ ನಿಧಾನಗತಿಯ ಆರಂಭ

  10 ಓವರ್ ಅಂತ್ಯಕ್ಕೆ ಚೆನ್ನೈ ಎರಡು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. 

 • 08:23 pm

  ರೈನಾ ಔಟ್, ತೆವಾಟಿಯಾಗೆ ಎರಡನೇ ವಿಕೆಟ್

 • 08:14 pm

  ಫಾಫ್-ಗಾಯಕವಾಡ್ ಜೊತೆಯಾಟ ಮುರಿದ ತೆವಾಟಿಯಾ

 • 07:58 pm

  ಚೆನ್ನೈ ಉತ್ತಮ ಆರಂಭ

  ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈ ತಂಡಕ್ಕೆ ಓಪನರ್‌ಗಳಾದ ಫಾಫ್ ಡು ಪ್ಲೆಸಿ ಹಾಗೂ ಋತುರಾಜ್ ಗಾಯಕವಾಡ್ ಉತ್ತಮ ಆರಂಭವೊದಗಿಸಿದರು. ಪವರ್ ಪ್ಲೇ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿತ್ತು.  

 • 07:24 pm

  ಆಡುವ ಬಳಗ ಇಂತಿದೆ:

 • 07:08 pm

  ರಾಜಸ್ಥಾನ್ ಫೀಲ್ಡಿಂಗ್

  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.