ಬೆಟ್ಟಿಂಗ್: ಏಳು ಮಂದಿ ಬಂಧನ

ಮಂಗಳವಾರ, ಏಪ್ರಿಲ್ 23, 2019
31 °C

ಬೆಟ್ಟಿಂಗ್: ಏಳು ಮಂದಿ ಬಂಧನ

Published:
Updated:

ಜೈಪುರ: ರಾಜಸ್ಥಾನ ರಾಯಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಭಾನುವಾರ ಚೆನ್ನೈಯಲ್ಲಿ ನಡೆದ ಐಪಿಎಲ್‌ ಪಂದ್ಯದ ವೇಳೆ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

‘ಖಚಿತ ಮಾಹಿತಿ ಆಧರಿಸಿ ಜೈಸಿಂಗಪುರ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಮೇಲೆ ದಾಳಿ ನಡೆಸಿದ್ದೆವು. ಅಲ್ಲಿ ಜತಿನ್‌ ಶಾ, ರಾಹುಲ್‌ ಪ್ರಜಾಪತಿ, ವಿನೋದ್‌ ಸಿಂಧಿ, ಹೇಮಂತ್‌ ಸಿಂಧಿ, ಹರೀಶ್‌ ಕುಮಾರ್‌ ಸಿಂಧಿ, ಚಂದು ಕುಮಾರ್‌ ಸಿಂಧಿ ಹಾಗೂ ರಾಜ್‌ಕುಮಾರ್‌ ಸಿಂಧಿ ಅವರು ಬೆಟ್ಟಿಂಗ್‌ನಲ್ಲಿ ತೊಡಗಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಡೆಪ್ಯೂಟಿ ಪೊಲೀಸ್‌ ಕಮೀಷನರ್‌ (ಅಪರಾಧ) ವಿಮಲ್‌ ಸಿಂಗ್‌ ತಿಳಿಸಿದ್ದಾರೆ.

‘ಬಂಧಿತರೆಲ್ಲರೂ ಅಜ್ಮೀರದವರು. ಅವರಿಂದ ₹19,240 ನಗದು, 33 ಮೊಬೈಲ್‌, ಎರಡು ಕಾರು, ಟಿವಿ, ಮೂರು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !