ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | KKR vs CSK: ಜಡೇಜಾ ‘ಸಿಕ್ಸರ್’ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜಯ
LIVE

ದುಬೈ: ಐಪಿಎಲ್ ಟೂರ್ನಿಯ ಪ್ಲೇ ಆಫ್‌ನಿಂದ ಈಗಾಗಲೇ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತ ರೈಡರ್ಸ್‌ ತಂಡದ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ ಕಿಂಗ್ಸ್‌, ಕೋಲ್ಕತ್ತ ತಂಡದ ಪ್ಲೇ ಆಫ್‌ ಕನಸಿಗೆ ಅಡ್ಡಿಪಡಿಸಿದೆ. ಕೋಲ್ಕತ್ತ ತಂಡಕ್ಕೆ ಟೂರ್ನಿಯಲ್ಲಿ ಇದು 7ನೇ ಸೋಲು. ಈ ತಂಡದ ಖಾತೆಯಲ್ಲಿ 12 ಅಂಕಗಳಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲೇ ಉಳಿದಿದೆ. ರೈಡರ್ಸ್ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಆಡಲಿದ್ದು, ಆ ಪಂದ್ಯದಲ್ಲಿ ಗೆದ್ದರೂ ಪ್ಲೇ ಆಫ್‌ಗೆ ತಲುಪುವುದು ಸುಲಭವಲ್ಲ. ಉಳಿದ ತಂಡಗಳ ಫಲಿತಾಂಶಗಳು ರೈಡರ್ಸ್‌ನ ಮುಂದಿನ ಹಾದಿಯನ್ನು ನಿರ್ಧರಿಸಲಿವೆ. ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಕಿಂಗ್ಸ್‌ ಇಲವೆನ್ ಪಂಜಾಬ್‌ ತಂಡಗಳು ಮೊದಲ ನಾಲ್ಕು ಸ್ಥಾನಗಳಲ್ಲಿ ಉಳಿದಿವೆ.
Last Updated 29 ಅಕ್ಟೋಬರ್ 2020, 18:22 IST
ಅಕ್ಷರ ಗಾತ್ರ
17:5029 Oct 2020

ಚೆನ್ನೈಗೆ 6 ವಿಕೆಟ್‌ ಜಯ

ಕೊನೆಯ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿದ ರವೀಂದ್ರ ಜಡೇಜಾ, ಚೆನ್ನೈ ತಂಡಕ್ಕೆ 6 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಕೊನೆಯ ಓವರ್‌ನಲ್ಲಿ ಚೆನ್ನೈಗೆ 10 ರನ್ ಬೇಕಿತ್ತು. ಈ ಓವರ್‌ ಎಸೆದ ಕಮಲೇಶ್ ನಾಗರಕೋಟಿ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ 3 ರನ್ ನೀಡಿದರು. ಹೀಗಾಗಿ ಚೆನ್ನೈ ತಂಡದ ಕೈಯಿಂದ ಜಾರುವ ಸಾಧ್ಯತೆ ಇತ್ತು. ಆದರೆ, ಕೊನೆಯ ಎರಡೂ ಎಸೆತಗಳಲ್ಲಿ ಸಿಕ್ಸರ್‌ ಸಿಡಿದ ಕಾರಣ ಗೆಲುವು ಸಾಧ್ಯವಾಯಿತು.

ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ಕಿಂಗ್ಸ್‌ ತಂಡ ಆಡಿರುವ 13 ಪಂದ್ಯಗಳಿಂದ 5ನೇ ಗೆಲುವು ಸಾಧಿಸಿತು. ಇತ್ತ ಕೆಕೆಆರ್‌ ಕೂಡ ಇಷ್ಟ ಪಂದ್ಯಗಳನ್ನು ಆಡಿದ್ದು, 12 ಪಾಯಿಂಟ್ಸ್‌ಗಳೊಂದಿಗೆ 5ನೇ ಸ್ಥಾನದಲ್ಲಿ ಉಳಿದಿದೆ.

17:3229 Oct 2020

19ನೇ ಓವರ್ ಮುಕ್ತಾಯ

19 ಓವರ್‌ಗಳ ಆಟ ಮುಕ್ತಾಯವಾಗಿದ್ದು ಚೆನ್ನೈ ತಂಡ 163 ರನ್ ಗಳಿಸಿಕೊಂಡಿದೆ. ರವಿಂದ್ರ ಜಡೇಜಾ ಮತ್ತು ಸ್ಯಾಮ್‌ ಕರನ್ ಕ್ರೀಸ್‌ನಲ್ಲಿದ್ದು, ಕೊನೆಯ ಓವರ್‌ನಲ್ಲಿ 10 ರನ್‌ ಗಳಿಸಬೇಕಿದೆ.

ಬೌಲರ್‌: ಲಾಕಿ ಫರ್ಗ್ಯೂಸನ್‌ (Wd 1 0 1 4 N2 6 4)

17:2129 Oct 2020

ಪೆವಿಲಿಯನ್ ಸೇರಿಕೊಂಡ ಗಾಯಕವಾಡ್‌

ಪ್ಯಾಟ್‌ ಕಮಿನ್ಸ್ ಎಸೆದ 18ನೇ ಓವರ್‌ನಲ್ಲಿ ಗಾಯಕವಾಡ್ ವಿಕೆಟ್‌ ಒಪ್ಪಿಸಿದ್ದಾರೆ. ತಂಡದ ಮೊತ್ತ ಸದ್ಯ 4 ವಿಕೆಟ್‌ಗೆ 143 ರನ್ ಆಗಿದೆ. ಇದೊಂದಿಗೆ ಸಿಎಸ್‌ಕೆ ಒತ್ತಡ ಹೆಚ್ಚಾಗಿದೆ.

ಗಾಯಕವಾಡ್‌ 53 ಎಸೆತಗಳಲ್ಲಿ 72 ರನ್ ಗಳಿಸಿದ್ದರು.

2 ಓವರ್ ಬಾಕಿ ಇದ್ದು, 30 ರನ್ ಬೇಕಾಗಿದೆ.
ಬೌಲರ್‌: ಪ್ಯಾಟ್‌ ಕಮಿನ್ಸ್‌ (1 W 0 1 1 1)

17:1829 Oct 2020

17ನೇ ಓವರ್ ಮುಕ್ತಾಯ

ಸಿಎಸ್‌ಕೆ 3 ವಿಕೆಟ್‌ಗಳನ್ನು ಕಳೆದುಕೊಂಡು 139 ರನ್‌ ಗಳಿಸಿದೆ. 18 ಎಸೆತಗಳಲ್ಲಿ ಗೆಲ್ಲಲು 34 ರನ್‌ ಬೇಕಾಗಿದೆ.

ಬೌಲರ್‌: ಲಾಕಿ ಫರ್ಗ್ಯೂಸನ್‌ (1 1 2 4 Wd 1 1)

17:1729 Oct 2020

16ನೇ ಓವರ್ ಮುಕ್ತಾಯ

16ನೇ ಓವರ್‌ ಮುಕ್ತಾಯವಾಗಿದ್ದು, ಕಿಂಗ್ಸ್‌ 3 ವಿಕೆಟ್‌ಗೆ 128 ರನ್ ಗಳಿಸಿಕೊಂಡಿದೆ.

ನಾಲ್ಕು ಓವರ್‌ಗಳಲ್ಲಿ ಗೆಲ್ಲಲು 45 ರನ್ ಬೇಕಾಗಿದೆ.

ಬೌಲರ್‌: ಸುನೀಲ್ ನರೇನ್‌ (0 1 0 1 1 4)

17:0729 Oct 2020

15ನೇ ಓವರ್ ಮುಕ್ತಾಯ

ಅಂಬಟಿ ರಾಯುಡು ವಿಕೆಟ್ ಪತನದ ಬಳಿಕ ಬಂದ ನಾಯಕ ಧೋನಿ ಕೇವಲ 1 ರನ್‌ ಗಳಿಸಿ ಔಟಾದರು. ವರುಣ್‌ ಚಕ್ರವರ್ತಿ ಅವರು ಎಸೆತವನ್ನು ಅಂದಾಜಿಸಲು ವಿಫಲರಾದ ಅವರು ಕ್ಲೀನ್‌ ಬೌಲ್ಡ್‌ ಆದರು.

ಇದೀಗ ಸ್ಯಾಮ್‌ ಕರನ್ ಕ್ರೀಸ್‌ಗೆ ಬಂದಿದ್ದು, ತಂಡದ ಮೊತ್ತ 3 ವಿಕೆಟ್‌ಗೆ 121 ರನ್‌ ಆಗಿದೆ.

30 ಎಸೆತಗಳಲ್ಲಿ ಗೆಲ್ಲಲು 52 ರನ್ ಬೇಕಾಗಿದೆ.

ಬೌಲರ್: ವರುಣ್ ಚಕ್ರವರ್ತಿ (1 0 0 W 0 0)

17:0229 Oct 2020

14ನೇ ಓವರ್ ಮುಕ್ತಾಯ: ರಾಯುಡು ವಿಕೆಟ್ ಪತನ

20 ಎಸೆತಗಳಲ್ಲಿ 38 ರನ್ ಗಳಿಸಿದ್ದ ಅಂಬಟಿ ರಾಯುಡು ವಿಕೆಟ್ ಒಪ್ಪಿಸಿದ್ದಾರೆ. ಸದ್ಯ ನಾಯಕ ಎಂಎಸ್‌ ಧೋನಿ ಕ್ರೀಸ್‌ಗೆ ಬಂದಿದ್ದಾರೆ.

ತಂಡದ ಮೊತ್ತ 2 ವಿಕೆಟ್‌ಗೆ 120 ರನ್ ಆಗಿದೆ.

ಗಾಯಕವಾಡ್‌ (61) ಮತ್ತು ಧೋನಿ (1) ಕ್ರೀಸ್‌ನಲ್ಲಿದ್ದು, ಉಳಿದಿರುವ 36 ಎಸೆತಗಳಲ್ಲಿ ಚೆನ್ನೈ ತಂಡಕ್ಕೆ 53 ರನ್ ಬೇಕಾಗಿದೆ.

ಬೌಲರ್‌: ಪ್ಯಾಟ್ ಕಮಿನ್ಸ್‌ (1 4 4 W 1 1)

16:5529 Oct 2020

13ನೇ ಓವರ್ ಮುಕ್ತಾಯ

ಚೆನ್ನೈ ತಂಡದ ಮೊತ್ತ 1 ವಿಕೆಟ್‌ ನಷ್ಟಕ್ಕೆ 109 ರನ್ ಗಳಿಸಿದೆ.

ಬೌಲರ್‌: ವರುಣ್ ಚಕ್ರವರ್ತಿ (4 1 1 1 0 2)

16:5129 Oct 2020

12ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಚೆನ್ನೈ

ಚೆನ್ನೈ ತಂಡ 1 ವಿಕೆಟ್‌ ಕಳೆದುಕೊಂಡು 100 ರನ್ ಗಳಿಸಿಕೊಂಡಿದೆ. ಋತುರಾಜ್ ಗಾಯಕವಾಡ್‌ (53) ಅರ್ಧಶತಕ ಗಳಿಸಿ ಆಡುತ್ತಿದ್ದಾರೆ. ಜೊತೆಗೆ ರಾಯುಡು ಮತ್ತು ಗಾಯಕವಾಡ್ ಜೋಡಿ 2ನೇ ವಿಕೆಟ್‌ ಜೊತೆಯಾಟದಲ್ಲಿ 50 ರನ್ ಕಲೆಹಾಕಿದೆ.

ಬೌಲರ್: ಕಮಲೇಶ್ ನಾಗರಕೋಟಿ (1 2 1 6 1 1)

16:4829 Oct 2020

11ನೇ ಓವರ್ ಮುಕ್ತಾಯ

11 ಓವರ್‌ಗಳ ಆಟ ಮುಗಿದಿದ್ದು, ಚೆನ್ನೈ ತಂಡ 1 ವಿಕೆಟ್‌ಗೆ 88 ರನ್‌ ಗಳಿಸಿದೆ.

ಬೌಲರ್‌: ಲಾಕಿ ಫರ್ಗ್ಯೂಸನ್ (4 1 1 6 1 1)