ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ವಿದೇಶದ ದುಬಾರಿ ಪ್ರತಿಭೆಗಳ ಮೇಲೆ ಕಣ್ಣು

Last Updated 22 ಮಾರ್ಚ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದಿರುವ ವೆಸ್ಟ್ ಇಂಡೀಸ್‌ನ ಶಿಮ್ರೊನ್ ಹೆಟ್ಮೆಯರ್ ಅವರು ಕ್ರಿಸ್‌ ಗೇಲ್ ಸ್ಥಾನ ತುಂಬುವರೇ ಎಂಬ ಕುತೂಹಲ ಈಗ ಮನೆ ಮಾಡಿದೆ.

ಹೆಟ್ಮೆಯರ್ ಹರಾಜು ಪ್ರಕ್ರಿಯಲ್ಲಿ ₹ 4.20 ಕೋಟಿ ರೂಪಾಯಿ ಮೌಲ್ಯ ಪಡೆದು ಆರ್‌ಸಿಬಿ ಸೇರಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಆವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ದಾಖಲೆಗಳನ್ನು ಮಾಡಿದ್ದಾರೆ. ಈಚೆಗೆ ಭಾರತದ ವಿರುದ್ಧ ನಡೆದಿದ್ದ ಸರಣಿಯಲ್ಲಿಯೂ ಅವರು ಮಿಂಚಿದ್ದರು. 22 ವರ್ಷದ ಶಿಮ್ರೊನ್ ಅವರು ದೊಡ್ಡ ಹೊಡೆತಗಳಿಂದ ಗಮನ ಸೆಳೆದಿದ್ದರು. ಅವರಿಗೆ ಇದು ಚೊಚ್ಚಲ ಐಪಿಎಲ್.

ಸ್ಯಾಮ್‌ ದುಬಾರಿ ಆಟಗಾರ
ಈ ಬಾರಿಯ ಹರಾಜಿನಲ್ಲಿ ಅತ್ಯಂತ ಹೆಚ್ಚಿನ ಮೌಲ್ಯಕ್ಕೆ ಮಾರಾಟವಾದ ವಿದೇಶಿ ಆಟಗಾರ ಇಂಗ್ಲೆಂಡ್‌ನ ಸ್ಯಾಮ್ ಕರನ್. 20 ವರ್ಷದ ಸ್ಯಾಮ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ₹ 7.20 ಕೋಟಿಗೆ ಖರೀದಿಸಿತ್ತು. ಹೋದ ವರ್ಷ ಇಂಗ್ಲೆಂಡ್‌ ಪ್ರವಾಸ ಮಾಡಿದ್ದ ಭಾರತ ತಂಡಕ್ಕೆ ಸೋಲಿನ ಕಹಿ ಉಣಿಸುವಲ್ಲಿ ಸ್ಯಾಮ್ ಪ್ರಮುಖ ಪಾತ್ರ ವಹಿಸಿದ್ದರು.

ಆಲ್‌ರೌಂಡರ್ ಕಾಲಿನ್: ದಕ್ಷಿಣ ಆಫ್ರಿಕಾದ ಕಾಲಿನ್ ಇನ್‌ಗ್ರಾಮ್ ಅವರ ಅನುಭವದ ಪ್ರಯೋಜನ ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಉತ್ಸುಕವಾಗಿದೆ. ₹ 6.40 ಕೋಟಿ ಮೌಲ್ಯ ಪಡೆದಿರುವ ಕಾಲಿನ್ ಶ್ರೇಯಸ್ ಅಯ್ಯರ್ ಬಳಗಕ್ಕೆ ಬಲ ತುಂಬಲಿದ್ದಾರೆ.

ಸಿಕ್ಸರ್‌ ಬ್ರೇಥ್‌ವೈಟ್: ವಿಶ್ವ ಟ್ವೆಂಟಿ –20ಯಲ್ಲಿ ವೆಸ್ಟ್‌ ಇಂಡೀಸ್ ತಂಡವು ಚಾಂಪಿಯನ್ ಆಗಲು ಕಾರಣರಾಗಿದ್ದ ಕಾರ್ಲೋಸ್ ಬ್ರಾಥ್‌ವೈಟ್ ಈ ಬಾರಿ ಕೋಲ್ಕತ್ತ ನೈಟ್ ರೈಡರ್ಸ್‌ ತಂಡದಲ್ಲಿ ಆಡಲಿದ್ದಾರೆ. ವಿಂಡೀಸ್‌ನ ಆಲ್‌ರೌಂಡರ್‌ ಸುನಿಲ್ ನಾರಾಯಣ್ ಇರುವ ಕೆಕೆಆರ್ ತಂಡದ ಬಲವು ಬ್ರಾಥ್‌ವೈಟ್ ಅವರ ಆಗಮನದಿಂದ ಹೆಚ್ಚಿದೆ. ಬಾಲಿವುಡ್ ನಠ ಶಾರೂಖ್ ಖಾನ್ ಅವರ ತಂಡವು ಕಾರ್ಲೋಸ್

ಅವರನ್ನು ₹ 5 ಕೋಟಿಗೆ ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT