ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಐಪಿಎಲ್ 2019

ಪ್ಲಾಸ್ಟಿಕ್‌ ದುಷ್ಪರಿಣಾಮ ಅರಿವಿಗೆ ಅಭಿಯಾನ ಆರಂಭಿಸಿದ ಕ್ರಿಕೆಟ್‌ ಅಭಿಮಾನಿಗಳು

Published:
Updated:

ನವದೆಹಲಿ: ಐಪಿಎಲ್ ಟೂರ್ನಿಯ ಫೈನಲ್‌ಗೆ ಸಜ್ಜಾಗುತ್ತಿರುವ ಹೈದರಾಬಾದ್‌ನಲ್ಲಿ ಸದ್ದಿಲ್ಲದೆ ಅಭಿಯಾನವೊಂದು ನಡೆಯುತ್ತಿದೆ. ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಕ್ರಿಕೆಟ್‌ ತಂಡಗಳ ಅಭಿಮಾನಿಗಳು ಒಟ್ಟಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಆರು ಐಪಿಎಲ್‌ ಫ್ರಾಂಚೈಸ್‌ಗಳ ಅಭಿಮಾನಿಗಳು ಹೈದರಾಬಾದ್‌ನಲ್ಲಿ ಸಭೆ ಸೇರಿದ್ದು ‘ಹೈದರಾಬಾದ್‌ ಘೋಷಣೆ’ಯ ಕುರಿತ ಹಾಡುಗಳನ್ನು ಪ್ರಸ್ತುತಪಡಿಸಲು ನಿರ್ಧರಿಸಿವೆ. ಕ್ರೀಡಾಕೂಟಗಳು ನಡೆಯುವ ಜಾಗಗಳ ಸುತ್ತ ಪ್ರಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಇವರ ಕಾರ್ಯಕ್ರಮದ ಉದ್ದೇಶವಾಗಿದೆ.

ಅಂತರರಾಷ್ಟ್ರೀಯ ತ್ಯಾಜ್ಯ ನಿರ್ವಹಣೆ ಸಂಸ್ಥೆಯು (ಐಐಡಬ್ಲ್ಯುಎಂ) ಯುರೋಪ್‌ ಯೂನಿಯನ್‌ನ ಸಂಪನ್ಮೂಲ ಬಳಕೆ ಸಂಘಟನೆಯ ಜೊತೆಗೂಡಿ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ.

‘ಪ್ರತಿ ಕ್ರಿಕೆಟ್ ಪಂದ್ಯದ ನಂತರ ನಾಲ್ಕರಿಂದ ನಾಲ್ಕೂವರೆ ಟನ್‌ಗಳಷ್ಟು ತ್ಯಾಜ್ಯವು ಅಂಗಣದ ಸ್ಟ್ಯಾಂಡ್‌ಗಳಲ್ಲಿ ಸಂಗ್ರಹವಾಗುತ್ತದೆ. ಇವುಗಳಲ್ಲಿ ಹೆಚ್ಚಿನವು ಧ್ವಜಗಳು ಮತ್ತು ತಂಡಗಳನ್ನು ಪ್ರೋತ್ಸಾಹಿಸಲು ಬಳಸುವ ಉತ್ಪನ್ನಗಳು. ಸಂಗ್ರಹವಾಗುವ ತ್ಯಾಜ್ಯದ ಪೈಕಿ ಸುಮಾರು 40 ಶೇಕಡಾ ವಸ್ತುಗಳು ಪ್ಲಾಸ್ಟಿಕ್‌ನಿಂದ ತಯಾರಿಸಿದವು. ಆದ್ದರಿಂದ ತ್ಯಾಜ್ಯ ಮುಕ್ತ ಪಂದ್ಯಗಳ ಕಡೆಗೆ ಗಮನ ನೀಡಿದ್ದೇವೆ’ ಎಂದು ಸಂಘಟನೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

‘ಐಐಡಬ್ಲ್ಯುಎಂ 2012ರಿಂದ ಗ್ರೀನ್ ವಿಕೆಟ್‌ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಹಸಿರು ಕ್ರಿಕೆಟ್ ಕ್ರೀಡಾಂಗಣ ಎಂದೆನಿಸಿಕೊಂಡಿದೆ. ಸೋಲಾರ್‌ ವ್ಯವಸ್ಥೆ, ಮಳೆ ನೀರು ಸಂಗ್ರಹ, ತ್ಯಾಜ್ಯ ನೀರಿನ ಮರುಬಳಕೆ ಮತ್ತು ಜೈವಿಕ ಚೀಲಗಳ ಮರುಬಳಕೆ ವ್ಯವಸ್ಥೆಯನ್ನು ಇಲ್ಲಿ ಜಾರಿಗೆ ತರಲಾಗಿದೆ’ ಎಂದು ಅವರು ಹೇಳಿದ್ದಾರೆ.

Post Comments (+)