19 ವರ್ಷದೊಳಗಿನವರ ಶ್ರೀಲಂಕಾ ಎದುರಿನ ಏಕದಿನ ಪಂದ್ಯ; ಭಾರತಕ್ಕೆ ಜಯ

7

19 ವರ್ಷದೊಳಗಿನವರ ಶ್ರೀಲಂಕಾ ಎದುರಿನ ಏಕದಿನ ಪಂದ್ಯ; ಭಾರತಕ್ಕೆ ಜಯ

Published:
Updated:

ಮೊರಾಟುವಾ: ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರು ಗಳಿಸಿದ ಶತಕದ ನೆರವಿನಿಂದ 19 ವರ್ಷದೊಳಗಿನ ಭಾರತ ತಂಡವು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಜಯಿಸಿದೆ. 

ಶುಕ್ರವಾರ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವು 8 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು ಭಾರತವು 3–2ರಿಂದ ತನ್ನದಾಗಿಸಿಕೊಂಡಿತು. 

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 212 ರನ್‌ ಗಳಿಸಿತು. ಭಾರತದ ಬೌಲರ್‌ಗಳ ಚುರುಕಾದ ದಾಳಿಗೆ ಕಂಗೆಟ್ಟ ಶ್ರೀಲಂಕಾ, ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು. 

ಭಾರತದ ಮೋಹಿತ್‌ ಜಂಗ್ರಾ ಅವರು 30 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು. 

ಶ್ರೀಲಂಕಾ ತಂಡದ ಮಧುಶ್ಕಾ ಫರ್ನಾಂಡೊ 95 ರನ್‌ (136 ಎ, 7 ಬೌಂ.) ಗಳಿಸಿದರು. ಕೇಶವಾ ಫರ್ನಾಂಡೊ ಅವರು 56 ರನ್‌ ದಾಖಲಿಸಿದರು. 

ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್‌ ಹಾಗೂ ದೇವದತ್ತ್‌ ಪಡಿಕ್ಕಲ್‌ ಉತ್ತಮ ಆರಂಭ ಒದಗಿಸಿದರು. ಇವರ ಜೊತೆಯಾಟದಲ್ಲಿ 71 ರನ್‌ಗಳು ಬಂದವು. ನಂತರ 38 ರನ್‌ ಗಳಿಸಿದ ದೇವದತ್ತ್‌ ಔಟಾದರು. ಪವನ್‌ ಶಾ (36) ಹಾಗೂ ಆರ್ಯನ್‌ ಜುಯಾಲ್‌ (22) ಅವರೊಂದಿಗೆ  ಉತ್ತಮ ಜೊತೆಯಾಟವಾಡಿದ ಜೈಸ್ವಾಲ್‌ 42.4 ಓವರ್‌ಗಳಲ್ಲಿ ತಂಡ ಗುರಿ ತಲುಪಲು ನೆರವಾದರು. ಮೂರು ಸಿಕ್ಸರ್‌ ಹಾಗೂ ಎಂಟು ಬೌಂಡರಿಗಳನ್ನು ಸಿಡಿಸಿದ ಜೈಸ್ವಾಲ್‌ 114 ರನ್‌ ಗಳಿಸಿ ಔಟಾಗದೆ ಉಳಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 212 (ಮಧುಶ್ಕಾ ಫರ್ನಾಂಡೊ 95, ಕೇಶವಾ ಫರ್ನಾಂಡೊ 56, ಮೋಹಿತ್‌ ಜಂಗ್ರಾ 30ಕ್ಕೆ 2). 

ಭಾರತ: 42.4 ಓವರ್‌ಗಳಲ್ಲಿ 2 ವಿಕೆಟ್‌ಗೆ 214 (ಯಶಸ್ವಿ ಜೈಸ್ವಾಲ್‌ ಔಟಾಗದೆ 114). 

ಫಲಿತಾಂಶ: 19 ವರ್ಷದೊಳಗಿನವರ ಭಾರತ ತಂಡಕ್ಕೆ 8 ವಿಕೆಟ್‌ಗಳ ಜಯ ಹಾಗೂ 3–2ರಲ್ಲಿ ಸರಣಿ ಕೈವಶ.  

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !