ಲಂಡನ್: ಲಾರ್ಡ್ಸ್ ಟೆಸ್ಟ್ನಲ್ಲಿ ಆಡಲು ವೇಗಿ ಜೋಫ್ರಾ ಆರ್ಚರ್ ಸಿದ್ಧವಾಗಿದ್ದಾರೆ ಎಂದು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಲ್ಸ್ ಹೇಳಿದ್ದಾರೆ.

ಗಾಯಗೊಂಡಿದ್ದ ಜೋಫ್ರಾ ಆರ್ಚರ್ 2021ರ ಫೆಬ್ರುವರಿಯಿಂದ ಯಾವುದೇ ಟೆಸ್ಟ್ ಪಂದ್ಯ ಆಡಿಲ್ಲ. ಅವರ ಫಿಟ್ನೆಸ್ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸ್ಟೋಕ್ಸ್, ಜೋಫ್ರಾ ಶೇ 100ರಷ್ಟು ಫಿಟ್ ಆಗಿದ್ದಾರೆ ಎಂದಿದ್ದಾರೆ.

ಟೆಸ್ಟ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವ ದೃಷ್ಟಿಯಿಂದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಸೆಕ್ಸ್ ತಂಡದ ಪರ ಜೋಫ್ರಾ ಆಡಿದ್ದರು.

ಗಾಯದಿಂದ ಚೇತರಿಸಿಕೊಂಡಿರುವ ಜೋಫ್ರಾ ಅವರ ಹೆಸರನ್ನು 3ನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿರುವ ಇಂಗ್ಲೆಂಡ್ ತಂಡದಲ್ಲಿ ಸೇರಿಸಲಾಗಿತ್ತು.

ಸಸೆಕ್ಸ್ ಪರ ಪ್ರಥಮ ದರ್ಜೆ ಪಂದ್ಯವನ್ನು ಆಡಿರುವ ಜೋಫ್ರಾ, ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಲಾರ್ಡ್ಸ್ ಟೆಸ್ಟ್ಗೆ ಮುಂಚಿತವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಜೋಫ್ರಾ ಆಡಲು ಫಿಟ್ ಆಗಿಲ್ಲವೆಂದಾದರೆ ನಾವು ಆಯ್ಕೆ ಮಾಡುತ್ತಿರಲಿಲ್ಲ ಎಂದಿದ್ದಾರೆ.

‘ಜೋಫ್ರಾ ಪುನರಾಗಮನವು ಇಂಗ್ಲೆಂಡ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಜೋಫ್ರಾಗೂ ಇದು ಉತ್ತಮ ಅವಕಾಶ. ಬಹಳ ಸಮಯದಿಂದ ಅವರು ಟೆಸ್ಟ್ ಕ್ರಿಕೆಟ್ ಆಡಿಲ್ಲ. ಗಾಯದಿಂದ ಚೇತರಿಸಿಕೊಂಡ ಅವರ ಪ್ರಯತ್ನ ಶ್ಲಾಘನಿಯ. ಈ ಹಿಂದೆ ಅವರು ಆಡಿರುವ ರೀತಿ ಗಮನಿಸಿದರೆ, ಅವರನ್ನು ತಂಡಕ್ಕೆ ಸ್ವಾಗತಿಸುವುದು ಸಂತಸದ ವಿಚಾರವಾಗಿದೆ’ ಎಂದಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಲಾರ್ಡ್ಸ್ನಲ್ಲಿ ನಾಳೆ 3ನೇ ಪಂದ್ಯ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.