ಮಂಗಳವಾರ, ಸೆಪ್ಟೆಂಬರ್ 21, 2021
29 °C

ಇಂಗ್ಲೆಂಡ್‌ಗೆ ಜೊನಾಥನ್‌ ಟ್ರಾಟ್‌ ಬ್ಯಾಟಿಂಗ್‌ ಕೋಚ್‌

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಮುಂಬರುವ ಪಾಕಿಸ್ತಾನ ವಿರುದ್ಧದ ಸರಣಿಗೆ ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ ಕೋಚ್ ಆಗಿ ಖ್ಯಾತ ಆಟಗಾರ ಜೋನಾಥನ್‌ ಟ್ರಾಟ್‌ ನೇಮಕವಾಗಿದ್ದಾರೆ. ಆಂಗ್ಲರ ತಂಡವು ಪಾಕ್‌ ವಿರುದ್ಧ ಬುಧವಾರದಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ.

39 ವರ್ಷದ ಟ್ರಾಟ್‌ ಅವರು ಇಂಗ್ಲೆಂಡ್ ಪರ 52 ಟೆಸ್ಟ್‌ ಪಂದ್ಯಗಳಲ್ಲಿ ಆಡಿ 3835 ರನ್‌ ಕಲೆಹಾಕಿದ್ದಾರೆ. 68 ಏಕದಿನ ಪಂದ್ಯಗಳು ಹಾಗೂ ಏಳು ಟ್ವೆಂಟಿ–20 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಅವರು ಗಳಿಸಿದ ಒಟ್ಟು ರನ್‌ 18,662. 2015ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

‘ಇಂಗ್ಲೆಂಡ್‌ ತಂಡದ ಸ್ಪಿನ್‌ ಬೌಲಿಂಗ್‌ ಕೋಚ್‌ ಜೀತನ್‌ ಪಟೇಲ್‌ ಹಾಗೂ ವೇಗದ ಬೌಲಿಂಗ್‌ ತರಬೇತುದಾರ ಗ್ರೇಮ್‌ ವೆಲ್ಷ್‌ ಅವರನ್ನು ಟ್ರಾಟ್‌ ಸೇರಿಕೊಳ್ಳಲಿದ್ದಾರೆ’ ಎಂದು ಬಿಬಿಸಿ ವರದಿ ಮಾಡಿದೆ.

ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ಮಧ್ಯೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಸೌತಾಂಪ್ಟನ್‌ನ ಏಜಿಸ್‌ ಬೌಲ್‌ನಲ್ಲಿ ಉಳಿದೆರಡು ಪಂದ್ಯಗಳು ನಿಗದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು