ಮಂಗಳವಾರ, ನವೆಂಬರ್ 12, 2019
20 °C

ಕ್ರಿಕೆಟ್‌: ಕರುಣ್‌ಗೆ ಸಾರಥ್ಯ

Published:
Updated:
Prajavani

ಬೆಂಗಳೂರು: ಅನುಭವಿ ಆಟಗಾರ ಕರುಣ್‌ ನಾಯರ್‌ ಅವರು ಮುಂಬರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಈ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಟೂರ್ನಿಯು ಇದೇ ತಿಂಗಳ 8ರಿಂದ 17ರವರೆಗೆ ವಿಶಾಖಪಟ್ಟಣದಲ್ಲಿ ಆಯೋಜನೆಯಾಗಿದೆ.

ತಂಡ ಇಂತಿದೆ: ಕರುಣ್‌ ನಾಯರ್‌ (ನಾಯಕ), ರೋಹನ್‌ ಕದಂ, ದೇವದತ್ತ ಪಡಿಕ್ಕಲ್‌, ಪವನ್‌ ದೇಶಪಾಂಡೆ, ಅನಿರುದ್ಧ್‌ ಜೋಶಿ, ಪ್ರವೀಣ್‌ ದುಬೆ, ಲವನಿತ್‌ ಸಿಸೋಡಿಯಾ (ವಿಕೆಟ್‌ ಕೀಪರ್‌), ಕೆ.ಗೌತಮ್‌, ಜೆ.ಸುಚಿತ್‌, ಅಭಿಮನ್ಯು ಮಿಥುನ್‌, ವಿ.ಕೌಶಿಕ್‌, ಶ್ರೇಯಸ್‌ ಗೋಪಾಲ್‌, ಪ್ರತೀಕ್‌ ಜೈನ್‌, ನಿಹಾಲ್‌ ಉಲ್ಲಾಳ ಮತ್ತು ಆರ್‌.ಸಮರ್ಥ್‌.

ಕೋಚ್‌: ಯರೇಗೌಡ, ಬೌಲಿಂಗ್‌ ಕೋಚ್‌: ಎಸ್‌.ಅರವಿಂದ್‌, ಮ್ಯಾನೇಜರ್‌: ಅನುತೋಷ್‌ ಪಾಲ್‌, ಸ್ಟ್ರೆಂಥ್‌ ಆ್ಯಂಡ್‌ ಕಂಡಿಷನಿಂಗ್‌ ಕೋಚ್‌: ರಕ್ಷಿತ್‌, ಫಿಸಿಯೊ: ಜಾಬ ಪ್ರಭು, ವಿಡಿಯೊ ಅನಾಲಿಸ್ಟ್‌: ವಿನೋದ್‌.

ಪ್ರತಿಕ್ರಿಯಿಸಿ (+)