ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ ಶಾ ಬದಲಿಗೆ ಕೆ.ಎಲ್. ರಾಹುಲ್ ಆಡಬೇಕು: ಗವಾಸ್ಕರ್

Last Updated 21 ಡಿಸೆಂಬರ್ 2020, 14:13 IST
ಅಕ್ಷರ ಗಾತ್ರ

ನವದೆಹಲಿ: ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಫಾರ್ಮ್ ಕಳೆದುಕೊಂಡಿರುವ ಪೃಥ್ವಿ ಶಾ ಬದಲಿಗೆ ಕೆ.ಎಲ್. ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಬೇಕು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಶುಭ್ಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡುವುದು ಸೂಕ್ತ ಎಂದು ಅವರು ಹೇಳಿದ್ದಾರೆ.

"ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಎರಡು ಬದಲಾವಣೆಗೆ ಯೋಚಿಸಬಹುದು. ಮೊದಲನೆಯದಾಗಿ, ಪೃಥ್ವಿ ಶಾ ಬದಲಿಗೆ ಕೆ.ಎಲ್. ರಾಹುಲ್ ಅವರನ್ನು ಆರಂಭಿಕರಾಗಿ, ಶುಭ್ಮನ್ ಗಿಲ್ 5, 6 ಸ್ಥಾನಕ್ಕೆ ಬರಬೇಕು. ಕೆ.ಎಲ್. ರಾಹುಲ್ ಉತ್ತಮ್ಮ ಫಾರ್ಮ್‌ನಲ್ಲಿದ್ದು, ನಾವು ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೆ ಪಂದ್ಯದ ಗತಿಯೇ ಬದಲಾಗುತ್ತದೆ’ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಧನಾತ್ಮಕ ಮನೋಭಾವದಿಂದ ಆಡದಿದ್ದರೆ ಭಾರತಕ್ಕೆ 0–4ರ ಸೋಲು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾರೆ.

"ಟೆಸ್ಟ್ ಸರಣಿಯ ಉಳಿದ ಪಂದ್ಯಗಳಲ್ಲಿ ಕಮ್ ಬ್ಯಾಕ್ ಮಾಡುವ ಮನೋಭಾವದಿಂದ ಭಾರತ ಆಡಬೇಕು. ಒಂದೊಮ್ಮೆ, ಧನಾತ್ಮಕತೆ ಪ್ರದರ್ಶಿಸದಿದ್ದರೆ 0–4 ಸೋಲು ಸಂಭವಿಸಬಹು’ ಎಂದಿದ್ದಾರೆ.

"ಮೆಲ್ಬೋರ್ನ್ ಟೆಸ್ಟ್ ಪಂದ್ಯವನ್ನು ಭಾರತ ಉತ್ತಮವಾಗಿ ಆರಂಭಿಸಬೇಕು. ಧನಾತ್ಮಕ ಮನೋಭಾವದಿಂದ ಮೈದಾನಕ್ಕಿಳಿಯುವುದು ಅವರಿಗೆ ಅತ್ಯಂತ ಅವಶ್ಯಕ. ಆಸ್ಟ್ರೇಲಿಯಾದ ದೌರ್ಬಲ್ಯ ಅವರ ಬ್ಯಾಟಿಂಗ್"ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT