ಮುಂಬೈ: ಬ್ಯಾಟರ್ ಕೆ.ಎಲ್. ರಾಹುಲ್ ಅವರು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತಂಡದ ಕೊನೆಯ ಪಂದ್ಯದ ನಂತರ ತಮ್ಮ ಇಡೀ ಸಮಯವನ್ನು ಟೆಸ್ಟ್ ಸರಣಿಯ ಸಿದ್ಧತೆಗಾಗಿ ಸಮರ್ಪಿಸಿದ್ದರು ಎಂದು ಭಾರತ ತಂಡದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಹೇಳಿದರು.

ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ಅವರು ಅತಿ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟರ್ ಆಗಿದ್ದಾರೆ. ಅವರು 53.20ರ ಸರಾಸರಿಯಲ್ಲಿ 532 ರನ್ ಕಲೆಹಾಕಿದ್ದಾರೆ. ಅದರಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳಿವೆ. ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕ ಬ್ಯಾಟರ್ ಆಗಿ ಉತ್ತಮ ಆರಂಭವನ್ನೂ ನೀಡುತ್ತಿದ್ದಾರೆ. ಸರಣಿಗೂ ಕೆಲವು ದಿನಗಳ ಮುನ್ನ ತಂಡದಲ್ಲಿ ಕೋಚ್ ಆಗಿದ್ದ ಅಭಿಷೇಕ್ ಅವರ ಮಾರ್ಗದರ್ಶನದಲ್ಲಿ ರಾಹುಲ್ ಅಭ್ಯಾಸ ಮಾಡಿದ್ದರು.

‘ರಾಹುಲ್ ಅವರಲ್ಲಿ ಆದ ಪರಿವರ್ತನೆಗಳ ಕುರಿತು ನಾನೇನೂ ಮಾತನಾಡಬೇಕಿಲ್ಲ. ಅದೆಲ್ಲವೂ ಈಗ ನಮಗೆ ಅವರ ಆಟದಲ್ಲಿ ಕಾಣುತ್ತಿದೆ. ಅವರ ಪರಿಣಾಮಕಾರಿ ಆಟವು ಗಮನ ಸೆಳೆಯುತ್ತಿದೆ’ ಎಂದು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಯುಪಿ ವಾರಿಯರ್ಸ್ ತಂಡದ ಮುಖ್ಯ ಕೋಚ್ ಅಭಿಷೇಕ್ ಹೇಳಿದರು.

‘ರಾಹುಲ್ ಅವರು ಕಠಿಣ ಅಭ್ಯಾಸ ನಡೆಸಿದ್ದರು. ಇನ್ನೂ ಕೆಲವು ಆಟಗಾರರು ಟೆಸ್ಟ್ ಸರಣಿಗೆ ತೆರಳಲು ಅಭ್ಯಾಸವನ್ನು ಆರಂಭಿಸುವ ಮುನ್ನವೇ ರಾಹುಲ್ ತಲೀಮು ಪ್ರಮುಖ ಘಟ್ಟದಲ್ಲಿತ್ತು. ಅವರು ತಮ್ಮ ಪ್ರತಿ ನಿಮಿಷವನ್ನೂ ಅಭ್ಯಾಸಕ್ಕಾಗಿ ಮೀಸಲಿಟ್ಟರು’ ಎಂದು ಅಭಿಷೇಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.