ತಿರುವನಂತಪುರ (ಪಿಟಿಐ): ಭಾರತ ಕ್ರಿಕೆಟ್ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಸೋಮವಾರ ವೈಯಕ್ತಿಕ ಕಾರಣಗಳಿಂದಾಗಿ ನೆಟ್ಸ್ ಅಭ್ಯಾಸಕ್ಕೆ ಹಾಜರಾಗಲಿಲ್ಲ. ಆದರೆ ಮಂಗಳವಾರ ಇಲ್ಲಿ ನಡೆಯಲಿರುವ ನೆದರ್ಲೆಂಡ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.

ಸೆ.30ರಂದು ಗುವಾಹಟಿಯಲ್ಲಿ ಆಯೋಜಿಸಲಾಗಿದ್ದ ಇಂಗ್ಲೆಂಡ್ ಎದುರಿನ ಅಭ್ಯಾಸ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆಗ ಅವರು ಅಲ್ಲಿಂದಲೇ ನೇರವಾಗಿ ಮುಂಬೈಗೆ ತೆರಳಿದ್ದರು. ತುರ್ತು ಕಾರಣಗಳಿಗಾಗಿ ಅವರು ಕುಟುಂಬದೊಂದಿಗೆ ಇರಲು ತೆರಳಿದ್ದಾರೆನ್ನಲಾಗಿದೆ.

‘ಇವತ್ತಿನದು ಐಚ್ಛಿಕ ಅಭ್ಯಾಸವಾಗಿತ್ತು. ಕಡ್ಡಾಯವಾಗಿರಲಿಲ್ಲ. ಕೊಹ್ಲಿ ಅವರು ಶೀಘ್ರದಲ್ಲಿಯೇ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ಅವರು ಅಭ್ಯಾಸ ಪಂದ್ಯದಲ್ಲಿ ಆಡುವ ಸಾಧ್ಯತೆಯೂ ಇದೆ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಬೌಲರ್ ಮೊಹಮ್ಮದ್ ಶಮಿ ಕೂಡ ನೆಟ್ಸ್ನಲ್ಲಿ ಅಭ್ಯಾಸಕ್ಕೆ ಹಾಜರಾಗಲಿಲ್ಲ.

ಆದರೆ, ಕೆ.ಎಲ್. ರಾಹುಲ್, ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬೂಮ್ರಾ ಅವರ ಬೌಲಿಂಗ್ ಎದುರು ಬ್ಯಾಟರ್ಗಳು ಆಡಿದರು. ಸ್ಪಿನ್ ಜೋಡಿ ಅಶ್ವಿನ್ ಮತ್ತು ರವೀಂದ್ರ ಜಡೇಜ ಕೂಡ ಅಭ್ಯಾಸ ಮಾಡಿದರು.

ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಭಾರತಕ್ಕೆ ಇದು ಕೊನೆಯ ಅಭ್ಯಾಸ ಪಂದ್ಯವಾಗಿದೆ. ಚೆನ್ನೈನಲ್ಲಿ ಇದೇ 8ರಂದು ರೋಹಿತ್ ಬಳಗವು ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.