ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ, ಸೂರ್ಯಕುಮಾರ್‌: T20 ವಿಶ್ವಕಪ್‌ ಟೂರ್ನಿಯ ಪ್ರಭಾವಿ ತಂಡದಲ್ಲಿ ಸ್ಥಾನ

Last Updated 14 ನವೆಂಬರ್ 2022, 14:07 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡಿ ಐಸಿಸಿ ಪ್ರಕಟಿಸಿದ ‘ವಿಶ್ವಕಪ್‌ನ ಅತ್ಯಂತ ಪ್ರಭಾವಿ ತಂಡ‘ ದಲ್ಲಿ ಭಾರತದ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಸ್ಥಾನ ಪಡೆದಿದ್ದಾರೆ.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ 12ನೇ ಆಟಗಾರನಾಗಿ ಸ್ಥಾನ ದೊರೆತಿದೆ. ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌ನ ನಾಲ್ವರು ಮತ್ತು ’ರನ್ನರ್ಸ್‌ ಅಪ್‌’ ಪಾಕಿಸ್ತಾನದ ಇಬ್ಬರು ಆಟಗಾರರು ಇದ್ದಾರೆ.

‘ಈ ವಿಶ್ವಕಪ್‌ ಟೂರ್ನಿಯ ಶ್ರೇಷ್ಠ ಆಟಗಾರರನ್ನು ಸೇರಿಸಿಕೊಂಡು ಪ್ರಕಟಿಸಿರುವ ತಂಡದಲ್ಲಿ ಆರು ದೇಶಗಳ ಆಟಗಾರರು ಸ್ಥಾನ ಪಡೆದಿದ್ದಾರೆ’ ಎಂದು ಐಸಿಸಿಯ ಪ್ರಕಟಣೆ ತಿಳಿಸಿದೆ.

ಕೊಹ್ಲಿ ಅವರು ಟೂರ್ನಿಯಲ್ಲಿ 98.66ರ ಸರಾಸರಿಯಲ್ಲಿ ಒಟ್ಟು 296 ರನ್‌ ಕಲೆಹಾಕಿದ್ದಾರೆ. ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 82 ರನ್‌ ಗಳಿಸಿ ಗೆಲುವಿಗೆ ಕಾರಣರಾಗಿದ್ದರು.

ಸೂರ್ಯಕುಮಾರ್‌ ಯಾದವ್ ಮೂರು ಅರ್ಧಶತಕಗಳು ಸೇರಿದಂತೆ ಒಟ್ಟು 239 ರನ್‌ ಪೇರಿಸಿದ್ದಾರೆ. ಅವರು 189.68 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

ಇಂಗ್ಲೆಂಡ್‌ನ ಆರಂಭಿಕ ಬ್ಯಾಟರ್‌ಗಳಾದ ಜೋಸ್‌ ಬಟ್ಲರ್‌, ಅಲೆಕ್ಸ್‌ ಹೇಲ್ಸ್‌ ಹಾಗೂ ಬೌಲರ್‌ಗಳಾದ ಸ್ಯಾಮ್‌ ಕರನ್‌, ಮಾರ್ಕ್‌ ವುಡ್‌ ಅವರು ತಂಡದಲ್ಲಿದ್ದಾರೆ. ಕರನ್‌ ಅವರು ಫೈನಲ್‌ನ ಪಂದ್ಯಶ್ರೇಷ್ಠ ಅಲ್ಲದೆ ಟೂರ್ನಿಯ ಶ್ರೇಷ್ಠ ಆಟಗಾರ ಗೌರವ ಪಡೆದುಕೊಂಡಿದ್ದರು.

ಪಾಕಿಸ್ತಾನದ ಆಲ್‌ರೌಂಡರ್‌ ಶಾದಾಬ್‌ ಖಾನ್‌ ಮತ್ತು ವೇಗದ ಬೌಲರ್‌ ಶಾಹೀನ್‌ ಶಾ ಆಫ್ರಿದಿಗೆ ಅವಕಾಶ ದೊರೆತಿದೆ. ಜಿಂಬಾಬ್ವೆಯ ಅಲ್‌ರೌಂಡರ್‌ ಸಿಕಂದರ್‌ ರಝಾ ಅವರು ಪ್ರಮುಖ ಆಟಗಾರರನ್ನು ಹಿಂದಿಕ್ಕಿ ‘ಪ್ರಭಾವಿಗಳ ತಂಡ‘ದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರಝಾ ಅವರು ಟೂರ್ನಿಯಲ್ಲಿ 219 ರನ್‌ ಗಳಿಸಿದ್ದಲ್ಲದೆ, 10 ವಿಕೆಟ್‌ ಪಡೆದುಕೊಂಡಿದ್ದಾರೆ.

ತಂಡ ಹೀಗಿದೆ

ಅಲೆಕ್ಸ್‌ ಹೇಲ್ಸ್‌, ಜೋಸ್‌ ಬಟ್ಲರ್‌, ಸ್ಯಾಮ್‌ ಕರನ್, ಮಾರ್ಕ್‌ ವುಡ್‌ (ಇಂಗ್ಲೆಂಡ್‌), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್ (ಭಾರತ), ಗ್ಲೆನ್‌ ಫಿಲಿಪ್ಸ್‌ (ನ್ಯೂಜಿಲೆಂಡ್‌), ಸಿಕಂದರ್‌ ರಝಾ (ಜಿಂಬಾಬ್ವೆ), ಶಾದಾಬ್‌ ಖಾನ್, ಶಾಹೀನ್‌ ಶಾ ಆಫ್ರಿದಿ (ಪಾಕಿಸ್ತಾನ), ಎನ್ರಿಕ್‌ ನಾರ್ಕಿಯಾ (ದಕ್ಷಿಣ ಆಫ್ರಿಕಾ). 12ನೇ ಆಟಗಾರ: ಹಾರ್ದಿಕ್‌ ಪಾಂಡ್ಯ (ಭಾರತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT