ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಆಯುಷ್‌ ಕೊಠಾರಿ ಆಲ್‌ರೌಂಡ್ ಆಟ

Last Updated 19 ನವೆಂಬರ್ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ಆಯುಷ್ ಕೊಠಾರಿ ಅವರ ಆಲ್‌ರೌಂಡ್ ಆಟದ ನೆರವಿನಿಂದ ಸ್ಪಾರ್ಕ್ಲರ್ಸ್‌ ಕ್ರಿಕೆಟ್ ಕ್ಲಬ್‌ ತಂಡ ಕೆಎಸ್‌ಸಿಎ ಗುಂಪು–1, ಐದನೇ ಡಿವಿಷನ್‌ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಜಯ ಸಾಧಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ಈ ತಂಡ ಆನೆಕಲ್‌ ಟೌನ್ ಕ್ರಿಕೆಟ್ ಕ್ಲಬ್‌ ಎದುರು ಗೆದ್ದಿತು.

ಮೊದಲು ಬ್ಯಾಟಿಂಗ್ ಮಾಡಿದ ಸ್ಪಾರ್ಕ್ಲರ್ಸ್‌ ತಂಡ ಸಚಿನ್‌, ವಿಶಾಲ್, ಆಯುಷ್ ಮತ್ತು ಸುಂದರ್‌ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 346 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಆನೆಕಲ್ ತಂಡ 223 ರನ್‌ಗಳಿಗೆ ಪತನ ಕಂಡಿತು. ಅಮರ್‌ ಅವರ ಶತಕ ವ್ಯರ್ಥವಾಯಿತು.

ಸಂಕ್ಷಿಪ್ತ ಸ್ಕೋರು: ಸ್ಪಾರ್ಕ್ಲರ್ಸ್‌ ಕ್ರಿಕೆಟ್ ಕ್ಲಬ್‌: 49.5 ಓವರ್‌ಗಳಲ್ಲಿ 346 (ಸಚಿನ್‌ 95, ವಿಶಾಲ್‌ 79, ಆಯುಷ್‌ ಕೊಠಾರಿ 53, ಸುಂದರ್‌ 54;ಹೇಮಂತ್‌ 63ಕ್ಕೆ2, ಇಂಬರಸಂಗಮ್‌ 73ಕ್ಕೆ2, ಹೇಮಂತ್‌ 63ಕ್ಕೆ2, ರಜತ್‌ 62ಕ್ಕೆ3); ಆನೆಕಲ್‌ ಟೌನ್ ಕ್ರಿಕೆಟ್‌ ಕ್ಲಬ್‌: 28.1 ಓವರ್‌ಗಳಲ್ಲಿ 223 (ಅಮರ್‌ 142; ಆಯುಷ್ ಕೊಠಾರಿ 61ಕ್ಕೆ4, ಪ್ರದೀಪ್‌ 27ಕ್ಕೆ3). ಫಲಿತಾಂಶ: ಸ್ಪಾರ್ಕ್ಲರ್ಸ್‌ ಕ್ರಿಕೆಟ್ ಕ್ಲಬ್‌ ತಂಡಕ್ಕೆ 123 ರನ್‌ಗಳ ಜಯ.

ಮಹಾರಾಣ ಕ್ರಿಕೆಟ್ ಕ್ಲಬ್‌: 49.3 ಓವರ್‌ಗಳಲ್ಲಿ 358 (ಅತೀಕ್ 70, ಅಡ್ನಾನ್‌ ವೆಂಕಟೇಶ್‌ 68, ಕಿರಣ್‌ ದೇವ್‌ 92; ಅಭಿಷೇಕ್‌ 50ಕ್ಕೆ2, ಪ್ರತೀಕ್‌ 57ಕ್ಕೆ4); ಯುವಿಸಿಇ ಕ್ರಿಕೆಟ್‌ ಕ್ಲಬ್‌: 42.3 ಓವರ್‌ಗಳಲ್ಲಿ 237 (ಮೋನಿಷ್‌ ಟಿ 69, ಭರತ್ ಎಸ್‌ 94; ಸ್ಯಾಮ್ಯುಯೆಲ್ಸ್‌ 48ಕ್ಕೆ2, ಕಿರಣ್‌ ದೇವ್ 20ಕ್ಕೆ2, ಮಂಜುನಾಥ್‌ 15ಕ್ಕೆ3). ಫಲಿತಾಂಶ: ಮಹಾರಾಣ ತಂಡಕ್ಕೆ 121 ರನ್‌ಗಳ ಗೆಲುವು.

ಕ್ರೆಸೆಂಟ್‌ ಕ್ರಿಕೆಟ್ ಕ್ಲಬ್‌(2): 43.5 ಓವರ್‌ಗಳಲ್ಲಿ 196 (ಸೂರಜ್‌ 40, ಕೌಶಿಕ್‌ 31, ಅಖಿಲ್ 39‍; ಮಹೇಶ್‌ 56ಕ್ಕೆ2, ಸಾದಿಕ್‌ 42ಕ್ಕೆ4, ರಾಯ್‌ 29ಕ್ಕೆ2); ಕೆಂಗೇರಿ ಕ್ರಿಕೆಟರ್ಸ್‌: 44 ಓವರ್‌ಗಳಲ್ಲಿ 166 (ಆರ್ಸಲನ್‌ 63; ರೋಷನ್‌ ಲಾಲ್‌ 33ಕ್ಕೆ2, ಗಗನ್‌ 41ಕ್ಕೆ2, ಕೌಶಿಕ್‌ 27ಕ್ಕೆ2, ರೋಷನ್‌ 39ಕ್ಕೆ2, ದಿಗ್ವಿಜಯ್‌ 22ಕ್ಕೆ2). ಫಲಿತಾಂಶ: ಕ್ರೆಸೆಂಟ್‌ ಕ್ರಿಕೆಟ್ ಕ್ಲಬ್‌ಗೆ 30 ರನ್‌ಗಳ ಗೆಲುವು. ಎಂಇಐ ಪಾಲಿಟೆಕ್ನಿಕ್‌ ಕ್ರಿಕೆಟ್ ಕ್ಲಬ್‌: 20.2 ಓವರ್‌ಗಳಲ್ಲಿ 94 (ವರುಣ್‌ ಜೀರಾಲಿ 37; ಶ್ರೀನಿವಾಸ್‌ 27ಕ್ಕೆ5, ಶಶಾಂಕ್‌ 4ಕ್ಕೆ3); ಫ್ರೆಂಡ್ಸ್‌ ಕ್ರಿಕೆಟ್‌ ಕ್ಲಬ್‌: 14.2 ಓವರ್‌ಗಳಲ್ಲಿ 5ಕ್ಕೆ98 (ಅರುಣ್ ಕುಮಾರ್‌ 46; ಕುಮಾರ್‌ 31ಕ್ಕೆ3). ಫಲಿತಾಂಶ: ಫ್ರೆಂಡ್ಸ್‌ ಕ್ರಿಕೆಟ್‌ ಕ್ಲಬ್‌ಗೆ ಐದು ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT