ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ–20 ತಂಡದಿಂದ ಕ್ರಮೇಣ ಹೊರಹೋಗಲಿರುವ ಹಿರಿಯ ಆಟಗಾರರು: ಬಿಸಿಸಿಐ ಮೂಲಗಳ ಮಾಹಿತಿ

Last Updated 10 ನವೆಂಬರ್ 2022, 16:39 IST
ಅಕ್ಷರ ಗಾತ್ರ

ಮುಂಬೈ: ಮುಂಬರುವ 24 ತಿಂಗಳುಗಳಲ್ಲಿ ಭಾರತದ ಟಿ–20 ಕ್ರಿಕೆಟ್ ತಂಡದಲ್ಲಿ ಮಹತ್ತರ ಬದಲಾವಣೆಗೆ ಬಿಸಿಸಿಐ ಚಿಂತಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್‌. ಅಶ್ವಿನ್ ಸೇರಿದಂತೆ ಹಿರಿಯ ಕ್ರಿಕೆಟಿಗರು ಕ್ರಮೇಣ ಚುಟುಕು ತಂಡದಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಆರ್‌. ಅಶ್ವಿನ್ ಮತ್ತು ದಿನೇಶ್ ಕಾರ್ತಿಕ್ ಅವರು ವಿಶ್ವಕಪ್ ಸರಣಿಯಲ್ಲಿ ಚುಟುಕು ಕ್ರಿಕೆಟ್‌ನ ಕೊನೆಯ ಪಂದ್ಯಗಳನ್ನು ಆಡಿದಂತೆ ತೋರುತ್ತಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಟಿ–20 ಕ್ರಿಕೆಟ್‌ನಲ್ಲಿ ಮುಂದುವರಿಯುವ ಕುರಿತು ನಿರ್ಧಾರ ಕೈಗೊಳ್ಳುವ ನಿರ್ಧಾರವನ್ನು ಅವರಿಗೆ ಬಿಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ.

ಟಿ–20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹೀನಾಯ ಸೋಲುಂಡ ಬಳಿಕ ತೀವ್ರ ಹತಾಶರಾಗಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಕೋಚ್ ರಾಹುಲ್ ದ್ರಾವಿಡ್ ಸಂತೈಸಿದ್ದರು.

ಮೂಲಗಳ ಮಾಹಿತಿಯನ್ನೇ ನಂಬುವುದಾದರೆ, ಮುಂದಿನ ಟಿ–20 ವಿಶ್ವಕಪ್‌ಗೆ ಎರಡು ವರ್ಷ ಬಾಕಿ ಇದ್ದು, ಹಾರ್ದಿಕ್ ಪಾಂಡ್ಯಾ ನೇತೃತ್ವದಲ್ಲಿ ಹೊಸ ತಂಡ ರಚನೆಯಾಗಲಿದೆ.

‘ಯಾರೊಬ್ಬರನ್ನೂ ನಿವೃತ್ತಿ ಪಡೆಯುವಂತೆ ಬಿಸಿಸಿಐ ಕೇಳಿಲ್ಲ. ಆದರೆ, ಹಿರಿಯ ಆಟಗಾರರು ಮುಂದಿನ ಟಿ–20 ವಿಶ್ವಕಪ್ ದೃಷ್ಟಿಯಿಂದ ಟಿ–20 ತಂಡದಿಂದ ಹೊರಬಂದು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಹಿರಿಯ ಆಟಗಾರರು ನಿವೃತ್ತಿ ಘೋಷಿಸುವ ಅಗತ್ಯವಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಅವರು ಟಿ–20 ತಂಡದಲ್ಲಿ ಅವಕಾಶ ಪಡೆಯುವುದಿಲ್ಲ ಎಂದು ಅದು ಹೇಳಿದೆ. ಆದರೆ, ಈ ಬಗ್ಗೆ ಈಗಲೇ ನಿರ್ಧರಿಸಲು ಸಮಯವಲ್ಲ ಎಂದು ಕೋಚ್ ದ್ರಾವಿಡ್ ಪಿಟಿಐಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT