ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಸಮಬಲಗೊಂಡ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬುಧವಾರ ತವರಿಗೆ ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಅವರಿಗೆ ಅಭಿಮಾನಿಗಳು ಆತ್ಮೀಯ ಸ್ವಾಗತ ನೀಡಿದರು.

ಸರಣಿಯ ಎಲ್ಲ ಐದೂ ಪಂದ್ಯಗಳಲ್ಲಿ ಆಡಿದ 31 ವರ್ಷ ವಯಸ್ಸಿನ ಸಿರಾಜ್ 185.3 ಓವರುಗಳನ್ನು ಮಾಡಿದ್ದರು. 23 ವಿಕೆಟ್ಗಳನ್ನು ಕಬಳಿಸಿದ್ದರು.

ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಜೊತೆ ಲಂಡನ್ನಿಂದ ಮೊದಲು ಮುಂಬೈಗೆ ಬಂದಿಳಿದ ಸಿರಾಜ್ ಅವರಿಗೆ ಅಭಿಮಾನಿಗಳ ಸಣ್ಣ ಗುಂಪು ಅವರಿಗೆ ಸಂಭ್ರಮದ ಸ್ವಾಗತ ನೀಡಿತು. ಅಲ್ಲಿಂದ ಅವರು ಕಾರುಹತ್ತಿ ಡೊಮೆಸ್ಟಿಕ್ ಟರ್ಮಿನಲ್ಗೆ ತೆರಳಿ ಅಲ್ಲಿಂದ ಹೈದರಾಬಾದಿಗೆ ತೆರಳಿದರು. ಅಲ್ಲಿ ಅಭಿಮಾನಿಗಳು ನೆರೆದಿದ್ದರು.

‘ನಾವು ಅವರ ಜೊತೆ ಇನ್ನೂ ಮಾತನಾಡಿಲ್ಲ. ಆದರೆ ನಾವು ಅವರಿಗೆ ಅಭಿನಂದಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ದೇಶ ಹೆಮ್ಮೆಪಡುವಂತೆ ಮಾಡಿದ ಸಾಧನೆ ನಮಗೆಲ್ಲಾ ಅಭಿಮಾನದ ವಿಷಯ’ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
.ಕ್ರೀಡಾ ಆಡಳಿತ ಮಸೂದೆ: ನಿಯಮಕ್ಕೆ ತಿದ್ದುಪಡಿ; ಬಿಸಿಸಿಐಗೆ ಕೊಂಚ ನೆಮ್ಮದಿ.2027ರ ಏಕದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಮಾನ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.