2024ರ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಚುಟುಕು ಕ್ರಿಕೆಟ್ಗೆ ವಿದಾಯ ಹೇಳಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್ನಲ್ಲಷ್ಟೇ ಮುಂದುವರಿಯುವ ಸಲುವಾಗಿ ಇತ್ತೀಚೆಗೆ (2025ರ ಮೇ ತಿಂಗಳಲ್ಲಿ) ಟೆಸ್ಟ್ ಕ್ರಿಕೆಟ್ನಿಂದಲೂ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದರು.

ಇದೀಗ, ಅವರಿಬ್ಬರೂ ಈ ಮಾದರಿಯಲ್ಲಿ ಮುಂದುವರಿಯುವ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯು ದಕ್ಷಿಣ ಆಫ್ರಿಕಾದಲ್ಲಿ 2027ರ ಅಕ್ಟೋಬರ್ – ನವೆಂಬರ್ನಲ್ಲಿ ನಡೆಯಲಿದ್ದು, ಅದರಲ್ಲಿ ವಿರಾಟ್ ಹಾಗೂ ರೋಹಿತ್ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಇವರ ಸ್ಥಾನ ತುಂಬಲು ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ಸಜ್ಜಾಗಿದ್ದಾರೆ.

ಯುವ ತಂಡದ ಅಮೋಘ ಆಟ
ಬಹುತೇಕ ಯುವ ಆಟಗಾರರೇ ಇದ್ದ 'ಟೀಂ ಇಂಡಿಯಾ' ಇತ್ತೀಚೆಗೆ ನಡೆದ 'ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ' ಟೆಸ್ಟ್ ಸರಣಿಯಲ್ಲಿ ವಿರಾಟ್ ಹಾಗೂ ರೋಹಿತ್ ಅನುಪಸ್ಥಿತಿಯಲ್ಲಿ ಅಮೋಘ ಪ್ರದರ್ಶನ ತೋರಿತ್ತು. ಇಂಗ್ಲೆಂಡ್ನಲ್ಲಿ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಸಮಬಲದ ಹೋರಾಟ ನಡೆಸಿ 2–2 ಅಂತರದಲ್ಲಿ ಸಮ ಮಾಡಿಕೊಂಡಿತ್ತು. ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದ ಶುಭಮನ್ ಗಿಲ್, ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

ಈ ಸರಣಿ ಬೆನ್ನಲ್ಲೇ, ರೋಹಿತ್ ಬದಲು ಗಿಲ್ಗೆ ಏಕದಿನ ತಂಡದ ನಾಯಕತ್ವವನ್ನೂ ವಹಿಸಬೇಕು ಎಂಬುದಾಗಿ ಹಿರಿಯ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಟೆಸ್ಟ್ ಮಾದರಿಯಂತೆ ಏಕದಿನ ತಂಡದಲ್ಲೂ ಯುವ ಪಡೆ ಕಟ್ಟುವ ಆಲೋಚನೆಗಳು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಿವೆ ಎನ್ನಲಾಗುತ್ತಿದೆ.

ಅದಲ್ಲದೆ, 2027ರ ಹೊತ್ತಿಗೆ ವಿರಾಟ್ ಹಾಗೂ ರೋಹಿತ್ ವಯಸ್ಸು 40ರ ಆಸುಪಾಸಿನಲ್ಲಿರಲಿದೆ. ಈ ಎಲ್ಲ ಅಂಶಗಳು ಅವರಿಬ್ಬರು ಮುಂದುವರಿಯುವ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
.Rohit Sharma Retirement: ಟೆಸ್ಟ್ ಕ್ರಿಕೆಟ್ಗೆ ರೋಹಿತ್ ಶರ್ಮಾ ವಿದಾಯ.Kohli Retirement: ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ.
ಸ್ಪಷ್ಟ ಯೋಜನೆಯತ್ತ ಬಿಸಿಸಿಐ ಚಿತ್ತ
ರೋಹಿತ್ ಅವರು ತಾವು ಸಂಪೂರ್ಣ ಫಿಟ್ ಎಂಬುದನ್ನು ಸಾಬೀತು ಮಾಡಬೇಕಿದೆ. ವಿರಾಟ್ ಕೊಹ್ಲಿ ಅವರು, 2025ರ ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನ ನಡೆದ ಆರ್ಸಿಬಿ ಸಮಾರಂಭದಲ್ಲಿ ತಮ್ಮ ಮುಂದಿನ ಗುರಿ 'ಏಕದಿನ ವಿಶ್ವಕಪ್' ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ, ಬಿಸಿಸಿಐ ಆಲೋಚನೆ ಬೇರೆಯದ್ದೇ ಆಗಿದೆ. ಈ ಇಬ್ಬರು 'ಸೂಪರ್ಸ್ಟಾರ್'ಗಳು ವಿಶ್ವಕಪ್ನಲ್ಲಿ ಆಡುವುದು ಖಾತ್ರಿಯಿಲ್ಲ. ಹಾಗೆಯೇ, ಅವರ ಭವಿಷ್ಯದ ಕುರಿತು ಮಂಡಳಿಯು ಚರ್ಚಿಸುವ ಸಾಧ್ಯತೆ ಇದೆ.

'ಹೌದು ಈ ವಿಚಾರದ ಬಗ್ಗೆ ಶೀಘ್ರದಲ್ಲೇ ಚರ್ಚಿಸಲಾಗುವುದು. ಇನ್ನೂ ಎರಡು ವರ್ಷಕ್ಕೂ ಹೆಚ್ಚು ಸಮಯವಿದೆ. ಅಷ್ಟೊತ್ತಿಗೆ ವಿರಾಟ್ ಹಾಗೂ ರೋಹಿತ್ ವಯಸ್ಸು 40ರ ಆಸುಪಾಸಿನಲ್ಲಿರುತ್ತದೆ. ನಾವು ಕೊನೇ ಬಾರಿ ಏಕದಿನ ವಿಶ್ವಕಪ್ ಗೆದ್ದಿರುವುದು 2011ರಲ್ಲಿ. ಹಾಗಾಗಿ, ದೊಡ್ಡ ಟೂರ್ನಿಗೂ ಮುನ್ನ ಸ್ಪಷ್ಟ ಯೋಜನೆ ಹೊಂದಿರುವುದು ಅಗತ್ಯವಾಗಿದೆ. ಸಮಯಕ್ಕೆ ತಕ್ಕಂತೆ ಯುವ ಆಟಗಾರರನ್ನೂ ಕಣಕ್ಕಿಳಿಸುವ ಪ್ರಯೋಗ ನಡೆಸಬೇಕಿದೆ' ಎಂದು ಮೂಲಗಳು ತಿಳಿಸಿವೆ.

ಸ್ಥಿರ ಪ್ರದರ್ಶನ ತೋರುವ ಸವಾಲು
ವಿರಾಟ್ ಮತ್ತು ರೋಹಿತ್ ಅವರಿಗೆ ವಯಸ್ಸಿನದ್ದಷ್ಟೇ ಅಲ್ಲ; ಏಕದಿನ ಕ್ರಿಕೆಟ್ನಲ್ಲಿ ಆಡುವ ಅವಕಾಶಗಳು ಸೀಮಿತವಾಗಿರುವುದೂ ಪ್ರಮುಖ ಸವಾಲಾಗಿದೆ. ವರದಿಗಳ ಪ್ರಕಾರ ಭಾರತ ತಂಡ 2026ರ ಅಂತ್ಯದ ಹೊತ್ತಿಗೆ ಟಿ20 ಮತ್ತು ಟೆಸ್ಟ್ ಮಾದರಿಯ ನಡುವೆ 27 ಏಕದಿನ ಪಂದ್ಯಗಳಲ್ಲಿ ಆಡಲಿದೆ. ಏಕದಿನ ಮಾದರಿಯಲ್ಲಷ್ಟೇ ಆಡುವ ಇವರು, ಸರಣಿಯಿಂದ ಸರಣಿಗೆ ಇರುವ ಸಾಕಷ್ಟು ಬಿಡುವಿನ ನಡುವೆಯೂ ಸ್ಥಿರ ಪ್ರದರ್ಶನ ನೀಡಬೇಕಿದೆ. ಹಾಗಾದರೆ ಮಾತ್ರ, ವಿಶ್ವಕಪ್ನಲ್ಲಿ ಆಡುವ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಸಾಧ್ಯ.

ಭಾರತ ತಂಡ ಇದೇ ವರ್ಷ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಹಾಗೂ 5 ಟಿ20 ಪಂದ್ಯಗಳಲ್ಲಿ ಆಡಲಿದೆ. ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್ನಲ್ಲಿ ಹಾಗೂ ನ್ಯೂಜಿಲೆಂಡ್ ಎದುರು 2026ರ ಜನವರಿಯಲ್ಲಿ ತವರಿನಲ್ಲಿ ತಲಾ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಹೀಗೆ ಸಾಕಷ್ಟು ಬಿಡುವಿನ ನಡುವೆ ಏಕದಿನ ಸರಣಿಗಳು ನಡೆಯಲಿವೆ.

'ವಿರಾಟ್ ಹಾಗೂ ರೋಹಿತ್ ಅವರು ವೈಟ್ ಬಾಲ್ (ನಿಗದಿತ ಓವರ್ಗಳ) ಕ್ರಿಕೆಟ್ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬಹುತೇಕ ಎಲ್ಲವನ್ನೂ ಸಾಧಿಸಿದ್ದಾರೆ. ಹಾಗಾಗಿ, ಅವರ ಮೇಲೆ ಯಾರೂ ಒತ್ತಡ ಹೇರುವುದಿಲ್ಲ. ಆದಾಗ್ಯೂ, ಮುಂದಿನ ಏಕದಿನ ಕ್ರಿಕೆಟ್ ಆವೃತ್ತಿಗೂ ಮುನ್ನ ಪ್ರಮಾಣಿಕ ಮತ್ತು ವೃತ್ತಿಪರ ಮಾತುಕತೆ ನಡೆಯಲಿದೆ. ಅವರಿಬ್ಬರ ಮಾನಸಿಕ ಮತ್ತು ದೈಹಿಕ ಕ್ಷಮತೆಯ ಮೇಲೆ ಎಲ್ಲವೂ ನಿಂತಿದೆ' ಎಂದು ಮೂಲಗಳು ಸ್ಪಷ್ಟವಾಗಿ ಹೇಳಿವೆ.
.ಟೀಕಾಕಾರರ ಬಾಯಿ ಮುಚ್ಚಿಸಿದ ಯುವರಾಜ: ನಾಯಕತ್ವ ಹೊಣೆ ಸಮರ್ಥವಾಗಿ ನಿಭಾಯಿಸಿದ ಗಿಲ್. IND vs ENG: ಓವಲ್ನಲ್ಲಿ ಗಿಲ್ ಪಡೆಯ ಜಯಭೇರಿ; ಸರಣಿ 2-2ರಲ್ಲಿ ಸಮಬಲ.
2023ರಲ್ಲಿ ಫೈನಲ್ ಸೋಲು
2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದರು. ತವರಿನಲ್ಲೇ ನಡೆದಿದ್ದ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿದ್ದ ಟೀಂ ಇಂಡಿಯಾ, ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸಿತ್ತು.

ವಿರಾಟ್ (765 ರನ್) ಹಾಗೂ ರೋಹಿತ್ (597 ರನ್), ಟೂರ್ನಿಯ ಗರಿಷ್ಠ ಸ್ಕೋರರ್ಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.