ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ ಸರಣಿ ನಿರ್ಮಿಸಲಿರುವ ಧೋನಿ

Last Updated 30 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮುಂಬೈ : ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಅವರು ‘ಮೈಥಲಾಜಿಕಲ್ ಸೈ–ಫೈ’ ವೆಬ್ ಸರಣಿ ನಿರ್ಮಿಸಲಿದ್ದಾರೆ.

ಅವರು ಹೋದ ವರ್ಷ ತಮ್ಮ ಮಾಧ್ಯಮ ಸಂಸ್ಥೆ ಧೋನಿ ಎಂಟರ್‌ಟೇನ್‌ಮೆಂಟ್ ಆರಂಭಿಸಿದ್ದರು. 2019ರಲ್ಲಿ ‘ರೋರ್‌ ದ ಲಯನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ಅದನ್ನು ಕಬೀರ್ ಖಾನ್ ನಿರ್ದೆಶಿಸಿದ್ದರು. ಎರಡು ವರ್ಷಗಳ ನಿಷೇಧ ಶಿಕ್ಷೆಯ ನಂತರ ಚೆನ್ನೈ ತಂಡವು ಐಪಿಎಲ್‌ಗೆ ಮರಳಿದ್ದ ಸಂದರ್ಭದಲ್ಲಿ ಅದನ್ನು ನಿರ್ಮಿಸಲಾಗಿತ್ತು.

‘ಈಗ ಬರಲಿರುವ ವೆಬ್‌ ಸರಣಿಯು ರೋಚಕ ಸಾಹಸಗಾಥೆಯಾಗಿದೆ. ಅಘೋರಿ ಸಾಧುವೊಬ್ಬರ ನಿಗೂಢ ಜೀವನ ಪಯಣದ ಕುರಿತ ಚಿತ್ರ ಇದು. ಲೇಖಕರೊಬ್ಬರು ಬರೆದಿರುವ ಚೊಚ್ಲಲ ಕೃತಿಯಾಧಾರಿತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ. ಅಘೋರಿಯು ಈ ಚಿತ್ರದಲ್ಲಿ ಬಹಿರಂಗಗೊಳಿಸುವ ಕೆಲವು ರಹಸ್ಯಗಳು ಆಸಕ್ತಿದಾಯಕವಾಗಿವೆ. ತಲೆತಲಾಂತರದಿಂದ ನಂಬಿಕೊಂಡ ಬಂದ ಸಂಪ್ರದಾಯಗಳನ್ನು ಮೂಢನಂಬಿಕೆಗಳೆಂದು ಪ್ರತಿಪಾದಿಸುತ್ತಾರೆ. ಒಂದು ಸಾಮಾನ್ಯ ಚಿತ್ರಕ್ಕಿಂತ ಅಗೋಚರವಾದ ಸತ್ಯಗಳನ್ನು ಜನರ ಮುಂದಿಡುವ ಉದ್ದೇಶ ನಮ್ಮ ವೆಬ್ ಸರಣಿಯದ್ದಾಗಿದೆ’ ಎಂದು ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ, ಧೋನಿ ಪತ್ನಿ ಸಾಕ್ಷಿ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT