ಮಂಗಳವಾರ, ಜನವರಿ 26, 2021
16 °C
ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿ: ಇಂದು ಒಡಿಶಾ ವಿರುದ್ಧ ಪಂದ್ಯ

ಮೂರನೇ ಜಯದ ಮೇಲೆ ಮುಂಬೈ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌, ಗೋವಾ: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಮೂರನೇ ಜಯದ ನಿರೀಕ್ಷೆಯಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡವು ಭಾನುವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದೆ.

ಮುಂಬೈ ತಾನಾಡಿದ ಮೊದಲ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿ ಎದುರು ಸೋತಿತ್ತು. ಎರಡನೇ ಪಂದ್ಯದಲ್ಲಿ 1–0ಯಿಂದ ಎಫ್‌ಸಿ ಗೋವಾ ಎದುರು ಗೆದ್ದಿತ್ತು. ಕೊನೆಯ ಪಂದ್ಯದಲ್ಲಿ 3–0ಯಿಂದ ಎಸ್‌ಸಿ ಈಸ್ಟ್ ಬೆಂಗಾಲ್‌ ಎದುರು ಗೆದ್ದಿತ್ತು.

ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ತಂಡವು ಗೆಲುವಿಗೆ ಆ್ಯಡಂ ಲೆ ಫೊಂಡ್ರೆ ಹಾಗೂ ಬಾರ್ತೊಲೊಮಿವ್ ಒಗ್ಬೆಚೆ ಅವರನ್ನು ಹೆಚ್ಚಾಗಿ ಅವಲಂಬಿಸಿದೆ. ಈಸ್ಟ್ ಬೆಂಗಾಲ್‌ ಎದುರು ಫೊಂಡ್ರೆ ಎರಡು ಗೋಲು ಗಳಿಸಿದ್ದರು. ಮಿಡ್‌ ಫೀಲ್ಡರ್‌ಗಳಾದ ಅಹ್ಮದ್‌ ಜಾನೊಹ್‌, ಸೈ ಗೊಡ್ಡಾರ್ಡ್‌ ಅವರೂ ಮಿಂಚಲು ಸಜ್ಜಾಗಿದ್ದಾರೆ.

ಈಸ್ಟ್ ಬೆಂಗಾಲ್ ಎದುರು ಕಾಲ್ಚಳಕ ತೋರಿದ್ದ ಹೆರ್ನಾನ ಸಂಟಾನ ಕೂಡ ಅದ್ಭುತ ಲಯದಲ್ಲಿದ್ದಾರೆ.

ಈ ಆವೃತ್ತಿಯಲ್ಲಿ ಒಡಿಶಾ ಎಫ್‌ಸಿಗೆ ಒಂದು ಪಂದ್ಯದಲ್ಲೂ ಗೆಲುವು ಒಲಿದಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಆ ತಂಡ ಎರಡರಲ್ಲಿ ಸೋಲು ಹಾಗೂ ಒಂದು ಡ್ರಾ ಸಾಧಿಸಿದೆ.

ಮೇಲ್ನೋಟಕ್ಕೆ ಮುಂಬೈ ಬಲಿಷ್ಠವಾಗಿದೆ. ಆದರೆ ಒಡಿಶಾ ಪುಟಿದೇಳುವ ನಿರೀಕ್ಷೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು