ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: 224 ರನ್‌ಗಳಿಗೆ ಮುಂಬೈ ಆಲೌಟ್‌; ವಿದರ್ಭಗೆ ಆರಂಭಿಕ ಆಘಾತ

Published 10 ಮಾರ್ಚ್ 2024, 13:00 IST
Last Updated 10 ಮಾರ್ಚ್ 2024, 13:00 IST
ಅಕ್ಷರ ಗಾತ್ರ

ಮುಂಬೈ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ತಂಡವನ್ನು 224 ರನ್‌ಗಳಿಗೆ ಕಟ್ಟಿ ಹಾಕಿದೆ. 

ನಾಯಕ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ಮೊದಲ ಬ್ಯಾಟಿಂಗ್‌ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲೌಟ್‌ ಆಯಿತು. ವಿದರ್ಭ ಪರ ಯಶ್‌ ಠಾಕೂರ್‌, ದುಬೆ ತಲಾ 3 ವಿಕೆಟ್‌ ಪಡೆದರು. ಮುಂಬೈ ಪರ ಶಾರ್ದೂಲ್‌ ಠಾಕೂರ್‌ 75, ಪೃಥ್ವಿ ಶಾ 45 ರನ್‌ ಹೊಡೆದು ಗಮನ ಸೆಳೆದರು.

ಮೊದಲ ದಿನದಲ್ಲೇ ಬ್ಯಾಟಿಂಗ್‌ ಆರಂಭಿಸಿದ ವಿದರ್ಭ ಆರಂಭಿಕ ಆಘಾತ ಅನುಭವಿಸಿತು. ದಿನ ದಾಟದ ಅಂತ್ಯಕ್ಕೆ ವಿದರ್ಭ 31 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದೆ. ವಿದರ್ಭ ತಂಡ 193 ರನ್‌ಗಳ ಹಿನ್ನಡೆಯಲ್ಲಿದೆ. 

ಮುಂಬೈ, ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ 42ನೇ ಬಾರಿ ಪ್ರಶಸ್ತಿಗೆ ಯತ್ನಿಸಲಿದೆ. ಆದರೆ ಹೋರಾಟಕ್ಕೆ ಹೆಸರಾದ ವಿದರ್ಭ ತಂಡ ಪ್ರಬಲ ಪೈಪೋಟಿ ನೀಡುತ್ತಿದೆ.

ಸ್ಕೋರ್‌...

ಮುಂಬೈ: 224–10 (ಮೊದಲ ಇನ್ನಿಂಗ್ಸ್‌)

ವಿದರ್ಭ: 31–3 (ಮೊದಲ ಇನ್ನಿಂಗ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT