ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬೆಳಗಿದ ಕೃತಿಕ್, ನಿಕಿನ್‌

ಕೆಎಸ್‌ಸಿಎ 23 ವರ್ಷದೊಳಗಿನವರ ಅಂತರವಲಯ ಕ್ರಿಕೆಟ್ ಟೂರ್ನಿ
Last Updated 8 ಜನವರಿ 2021, 14:39 IST
ಅಕ್ಷರ ಗಾತ್ರ

ಬೆಂಗಳೂರು: ಕೃತಿಕ್ ಕೃಷ್ಣ (128, 138 ಎಸೆತ, 6 ಬೌಂಡರಿ, 3 ಸಿಕ್ಸರ್‌) ಹಾಗೂ ನಿಕಿನ್‌ ಜೋಸ್‌ (108, 142 ಎಸೆತ, 5 ಬೌಂಡರಿ) ಅವರು ಮತ್ತೊಮ್ಮೆ ಶತಕಗಳ ಮೂಲಕ ಮಿಂಚಿದರು. ಅವರಿಬ್ಬರ ಭರ್ಜರಿ ಆಟದಿಂದಾಗಿ ಮೈಸೂರು ತಂಡವು ಕೆಎಸ್‌ಸಿಎ 23 ವರ್ಷದೊಳಗಿನವರ ಅಂತರವಲಯ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಧಾರವಾಡ ತಂಡವನ್ನು 99 ರನ್‌ಗಳಿಂದ ಸೋಲಿಸಿತು.

ಮತ್ತೊಂದು ಪಂದ್ಯದಲ್ಲಿ ಸೌರಭ್ ಮುತ್ತೂರ್‌ ಅವರ ಶತಕವು (109) ರಾಯಚೂರು ವಲಯಕ್ಕೆ ಶಿವಮೊಗ್ಗ ತಂಡದ ಎದುರು 14 ರನ್‌ಗಳ ಜಯ ತಂದುಕೊಟ್ಟಿತು. ಇನ್ನೊಂದು ಹಣಾಹಣಿಯಲ್ಲಿ ತುಮಕೂರು ವಲಯ ತಂಡವು 8 ವಿಕೆಟ್‌ಗಳಿಂದ ಮಂಗಳೂರು ವಲಯದ ವಿರುದ್ಧ ಗೆದ್ದಿತು.

ಸಂಕ್ಷಿಪ್ತ ಸ್ಕೋರುಗಳು: ಐಎಎಫ್‌ ಕ್ರೀಡಾಂಗಣ: ಮೈಸೂರು ವಲಯ: 50 ಓವರ್‌ಗಳಲ್ಲಿ 2 ವಿಕೆಟ್‌ಗೆ 279 (ನಿಕಿನ್ ಜೋಸ್‌ 108, ಕೃತಿಕ್ ಕೃಷ್ಣ 128). ಧಾರವಾಡ ವಲಯ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 180 (ಸಚಿನ್ ರಜಪೂತ್‌ 39, ಅಂಗದರಾಜ್‌ ಹಿತ್ತಲಮನಿ 39, ಮುದಸ್ಸಿರ್ ನಜರ್‌ 23, ರೋಹಿತ್ ಪಾಟೀಲ್‌ ಔಟಾಗದೆ 26; ವೆಂಕಟೇಶ್‌ ಎಂ. 33ಕ್ಕೆ 2, ಸಾಯಿಶಿವ ನಾರಾಯಣ್‌ 25ಕ್ಕೆ 4). ಫಲಿತಾಂಶ: ಮೈಸೂರು ವಲಯ ತಂಡಕ್ಕೆ 99 ರನ್‌ಗಳ ಗೆಲುವು.

ಗ್ರೀನ್ ಸ್ಪೋರ್ಟ್ಸ್ ವಿಲೇಜ್‌ ಕ್ರೀಡಾಂಗಣ: ಮಂಗಳೂರು ವಲಯ: 42.3 ಓವರ್‌ಗಳಲ್ಲಿ 159 ಆಲೌಟ್‌ (ಹರ್ಷಿತ್ ಪೂಜಾರಿ 22, ಸತ್ಯ ಸ್ವರೂಪ್‌ 21, ಯಶ್‌ ಕಳಸಣ್ಣವರ 27, ಮೊಹಮ್ಮದ್ ಅರ್ಮಾನ್‌ 20, ಅಭಿಲಾಷ್‌ 40; ಮಂಜುನಾಥ್ ಜಿ. 31ಕ್ಕೆ 3, ಅಭಿಷೇಕ್ ಎಚ್‌.ಪಿ. 29ಕ್ಕೆ 2, ಪುನೀತ್‌ 30ಕ್ಕೆ2, ಸಂಜಯ್‌ ಬಿ. 29ಕ್ಕೆ 2). ತುಮಕೂರು ವಲಯ: 47.1 ಓವರ್‌ಗಳಲ್ಲಿ 2 ವಿಕೆಟ್‌ಗೆ 163 (ಸಂಜಯ್ ವಿ.ಎನ್‌. ಔಟಾಗದೆ 66, ಶ್ರೇಯಸ್ ಕೆ.ಬಿ. ಔಟಾಗದೆ 63). ಫಲಿತಾಂಶ: ತುಮಕೂರು ವಲಯ ತಂಡಕ್ಕೆ 8 ವಿಕೆಟ್‌ಗಳ ಗೆಲುವು.

ಕಿಣಿ ಸ್ಪೋರ್ಟ್ಸ್ ಅರೆನಾ: ರಾಯಚೂರು ವಲಯ: 50 ಓವರ್‌ಗಳಲ್ಲಿ 279 ಆಲೌಟ್‌ (ಸೌರಭ್‌ ಮುತ್ತೂರ್‌ 109, ಮಹೇಶ್ ಜಾಧವ್‌ 49, ಅಭಿಷೇಕ್ ಎಸ್‌.ಕೆ. 37; ಆದಿತ್ಯ ಎಸ್‌.ಎಸ್‌. 55ಕ್ಕೆ 2). ಶಿವಮೊಗ್ಗ ವಲಯ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 265 (ಚಂದನ್‌ ಡಿ.ಪಿ. 68, ನಿಕ್ಷೇಪ್ ಪಿ. ಖಾನಾಪುರ 71, ಸೌರಭ್ ಎಸ್‌.ಆರ್‌. 59; ವಿದ್ಯಾಧರ ಪಾಟೀಲ್‌ 54ಕ್ಕೆ 3, ಮಾಧವ ಪಿ.ಬಜಾಜ್‌ 36ಕ್ಕೆ 3). ಫಲಿತಾಂಶ: ರಾಯಚೂರು ವಲಯಕ್ಕೆ 14 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT