7

ಐದು ವರ್ಷದಲ್ಲಿ 203 ಪಂದ್ಯಗಳು

Published:
Updated:

ಮುಂಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮುಂಬರುವ ಕ್ರಿಕೆಟ್ ಟೂರ್ನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಭಾರತ ತಂಡವು ಮುಂದಿನ 5 ವರ್ಷಗಳ ಕಾಲ ಇತರ ಎಲ್ಲಾ ತಂಡಗಳಿಗಿಂತಲೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. 

ಐದು ವರ್ಷಗಳಲ್ಲಿ(2018-2023) ಬರೋಬ್ಬರಿ 203 ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಅದರಲ್ಲಿ 51 ಟೆಸ್ಟ್ ಪಂದ್ಯ, 83 ಏಕದಿನ ಪಂದ್ಯ ಹಾಗೂ 69 ಟಿ20 ಪಂದ್ಯಗಳಿವೆ. ನಂತರ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಇದೆ.

ವಿಂಡೀಸ್ ತಂಡ ಒಟ್ಟಾರೆ 186 ಹಾಗೂ ಇಂಗ್ಲೆಂಡ್ ತಂಡ 175 ಪಂದ್ಯಗಳನ್ನು ಆಡಲಿದೆ. ಫ್ಯೂಚರ್ ಟೂರ್ ಪ್ರೊಗ್ರಾಂ (ಎಫ್‌ಟಿಪಿ) ನಿಯಮದಲ್ಲಿ ಐಸಿಸಿಯು ಈ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.

ಯಾವ ತಂಡಕ್ಕೆ ಎಷ್ಟು ಪಂದ್ಯಗಳು

ದೇಶ; ಪಂದ್ಯ; ಟೆಸ್ಟ್; ಏಕದಿನ;ಟ್ವೆಂಟಿ–20

ಭಾರತ; 203;51;83;69

ವೆಸ್ಟ್ ಇಂಡೀಸ್; 186;43;75;68

ಇಂಗ್ಲೆಂಡ್; 175;59;66;50

ಆಸ್ಟ್ರೇಲಿಯಾ; 174;47;68;59

ಪಾಕಿಸ್ತಾನ; 164;40;61;63

ದಕ್ಷಿಣ ಆಫ್ರಿಕಾ; 160;38;66;56

ಶ್ರೀಲಂಕಾ; 160;43;71;66

ಬಾಂಗ್ಲಾದೇಶ; 160;44;59;57

ನ್ಯೂಜಿಲೆಂಡ್; 159;38;62;59 

ಐರ್ಲೆಂಡ್; 142;13;64;65

ಜಿಂಬಾಬ್ವೆ; 130;21;59;50

ಅಫ್ಗಾನಿಸ್ತಾನ; 109;13;51;45

ನೆದರ್‌ಲ್ಯಾಂಡ್ಸ್‌; 33;24;09

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 5

  Sad
 • 1

  Frustrated
 • 1

  Angry

Comments:

0 comments

Write the first review for this !