ಶನಿವಾರ, ಏಪ್ರಿಲ್ 4, 2020
19 °C

Video | ಐತಿಹಾಸಿಕ ಕ್ಯಾಚ್‌ ಎಂದು ಕಾಮೆಂಟೇಟರ್‌ ಬಣ್ಣಿಸಿದ ಜಡೇಜಾ ಕ್ಯಾಚ್‌ ಇದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರ ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಕುರಿತದ್ದೇ ಚರ್ಚೆ. ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ನೀಲ್ ವಾಗ್ನರ್ ಅವರ ಕ್ಯಾಚ್‌ ಅನ್ನು ’ಸೂಪರ್‌ ಮ್ಯಾನ್‌’ ರೀತಿಯಲ್ಲಿ ಪಡೆದ ಜಡೇಜ ಈಗ ಅಪಾರ ಜನಮೆಚ್ಚುಗೆ ಗಳಿಸುತ್ತಿದ್ದಾರೆ.

72ನೇ ಓವರ್‌ನಲ್ಲಿ ಶಮಿಯ ಎಸೆತವನ್ನು ನೀಲ್ ವಾಗ್ನರ್ ಅವರು ಸಿಕ್ಸರ್‌ಗೆ ಎತ್ತುವ ಪ್ರಯತ್ನ ಮಾಡಿದರು. ಆದರೆ ಡೀಪ್ ಸ್ಕ್ವೇರ್‌ ಬಳಿ ಇದ್ದ ಫೀಲ್ಡರ್ ಜಡೇಜ ಅನೂಹ್ಯ ರೀತಿಯಲ್ಲಿ ಮೇಲಕ್ಕೆ ಜಿಗಿದು ಎಡಗೈಯಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆದರು. ಮೈದಾನದಲ್ಲಿದ್ದ ಫೀಲ್ಡರ್‌ಗಳು ಮತ್ತು ವಾಗ್ನರ್ ಒಂದರೆಕ್ಷಣ ಚಕಿತರಾಗಿ ನಿಂತರು. 

ಜಡೇಜ ಸಾಹಸಮಯ ಕ್ಯಾಚ್‌ನ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಜನಮೆಚ್ಚುಗೆ ಗಳಿಸುತ್ತಿವೆ. ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾದ (ಎಲ್ಲ ಮಾದರಿಗಳು) ಅದ್ಭುತ ಕ್ಯಾಚ್‌ಗಳ ಸಾಲಿನಲ್ಲಿ ಜಡೇಜ ಸಾಹಸವೂ ಒಂದು  ಎಂದು ಬಣ್ಣಿಸಲಾಗುತ್ತಿದೆ. 


ಕ್ಯಾಚ್‌ ನಂತರ ಜಡೇಜಾ ಸಂಭ್ರಮ 

 


ತಂಡದ ಸದಸ್ಯರಿಂದ ಜಡೇಜಾಗೆ ಪ್ರಶಂಸೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು