ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ತರಬೇತಿ: ಮಹಿಳಾ ಕ್ರಿಕೆಟಿಗರಿಗೆ ನೆರವಾದ ರಾಧಾ ಕೃಷ್ಣಸ್ವಾಮಿ

Last Updated 5 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಿ ರುವುದರಿಂದ ಮೈದಾನಕ್ಕೆ ಹೋಗಿ ವರ್ಕ್‌ಔಟ್‌ ಮಾಡಲು ಆಗದ ರಾಜ್ಯ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರಿಗೆ ಬೆಂಗಳೂರಿನ ಫಿಟ್‌ನೆಸ್‌ ಟ್ರೈನರ್‌ ರಾಧಾ ಕೃಷ್ಣಸ್ವಾಮಿ ಆನ್‌ಲೈನ್‌ ಮೂಲಕವೇ ತರಬೇತಿ ನೀಡುತ್ತಿದ್ದಾರೆ.

ರಾಧಾ ಕೃಷ್ಣಸ್ವಾಮಿ ತಮ್ಮ ಮನೆಯಿಂದಲೇ ಆನ್‌ಲೈನ್‌ ಮೂಲಕ ಫಿಟ್‌ನೆಸ್‌ ಮಾರ್ಗದರ್ಶನ ನೀಡುತ್ತಿದ್ದಾರೆ.

‘ಝೂಮ್‌ ಕ್ಲೌಡ್‌ ಮೀಟಿಂಗ್‌ ಆ್ಯಪ್‌ ಸಹಾಯ ದಿಂದ ಆನ್‌ಲೈನ್‌ನಲ್ಲಿ ಟೆನಿಸ್‌ ಆಟಗಾರರಿಗೆ ಮುಂಬೈನಲ್ಲಿ ತರಬೇತಿ ನೀಡುತ್ತಿರುವ ಫೋಟೊ ವನ್ನು ಸ್ನೇಹಿತರೊಬ್ಬರು ಕಳುಹಿಸಿದ್ದರು. ಲಾಕ್‌ಡೌನ್‌ ಇರುವುದರಿಂದ ಮೈದಾನಕ್ಕೆ ಬರಲಾಗದ ಕ್ರಿಕೆಟ್‌ ಕ್ರೀಡಾಪಟುಗಳಿಗೂ ಏಕೆ ಫಿಟ್‌ನೆಸ್‌ ತರಬೇತಿ ನೀಡಬಾರದು ಎಂಬ ಯೋಚನೆ ಬಂತು. ಮಾರ್ಚ್‌ 24ರಂದು ಪ್ರಾಯೋಗಿಕವಾಗಿ ಪರೀಕ್ಷಿಸಿದೆವು. ಇದು ಯಶಸ್ವಿಯಾಗಿದ್ದರಿಂದ ಮಾರ್ಚ್‌ 25ರಿಂದ ನಿತ್ಯವೂ ಆನ್‌ಲೈನ್‌ ಮೂಲಕ ತರಬೇತಿ ನೀಡಲು ಆರಂಭಿಸಿದೆ’ ಎಂದು ರಾಧಾ ಕೃಷ್ಣಸ್ವಾಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ದಿನಾಲೂ ಬೆಳಿಗ್ಗೆ 7ರಿಂದ 8 ಗಂಟೆವರೆಗೆ ಬೆಂಗಳೂರಿನ ಕರ್ನಾಟಕ ಯೂತ್‌ ಕ್ರಿಕೆಟ್‌ ಅಕಾಡೆಮಿಯ 10 ಮತ್ತು 17 ವರ್ಷದೊಳಗಿನ 15 ಬಾಲಕರಿಗೆ ತರಬೇತಿ ನೀಡುತ್ತಿದ್ದೇನೆ. ಬೆಳಿಗ್ಗೆ 10ರಿಂದ ಒಂದು ಗಂಟೆ ಕರ್ನಾಟಕ ಮಹಿಳಾ ಕ್ರಿಕೆಟ್‌ ತಂಡದ 16, 19, 23 ಹಾಗೂ ಸೀನಿಯರ್‌ ತಂಡದ 15 ಆಟಗಾರ್ತಿಯರಿಗೆ ತರಬೇತಿ ನೀಡುತ್ತಿದ್ದೇನೆ’ ಎಂದು ತಿಳಿಸಿದರು.

‘ಮನೆಯಲ್ಲಿರುವ ಸಾಧನ ಗಳನ್ನೇ ಬಳಸಿ ಕೊಂಡು ವ್ಯಾಯಾಮ ಮಾಡಿಸುತ್ತೇನೆ. ಸೂರ್ಯ ನಮಸ್ಕಾರ, ಎಲ್ಲಾ ಬಗೆಯ ಸ್ಟ್ರೆಚಿಂಗ್‌, ಸ್ಥಳದಲ್ಲೇ ಓಡುವುದು, ಜಿಗಿಯುವುದು ಸೇರಿ ಹಲವು ಬಗೆಯ ವ್ಯಾಯಾಮಗಳನ್ನು ಮಾಡಿಸುತ್ತಿದ್ದೇನೆ. ಪ್ರಾಣಾಯಾಮ, ಧ್ಯಾನದೊಂದಿಗೆ ಸೆಷನ್‌ ಮುಗಿಸುತ್ತೇನೆ’ ಎಂದು ಹೇಳಿದರು.

‘ಉಚಿತವಾಗಿ ಆನ್‌ಲೈನ್‌ನಲ್ಲಿ ತರಬೇತಿ ನೀಡುತ್ತಿದ್ದೇನೆ. ಒಂದು ಸೆಷನ್‌ನಲ್ಲಿ 100 ಜನರಿಗೆ ತರಬೇತಿ ನೀಡಲು ಅವಕಾಶವಿದೆ. ಆಸಕ್ತ ಕ್ರೀಡಾ ಪಟುಗಳು ಮುಂದೆ ಬಂದರೆ ಅವರಿಗೂ ತರಬೇತಿ ನೀಡಲು ಸಿದ್ಧವಿದ್ದೇನೆ’ ಎಂದು ರಾಧಾ (ಮೊ: 9655593017) ಹೇಳಿದರು.

ರಾಜ್ಯದ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ ರಾದ ದಿವ್ಯಾ ಜಿ., ಪ್ರತ್ಯುಶಾ ಸಿ., ಸಂಜನಾ, ಶಿಶಿರಾ ಗೌಡ, ರಕ್ಷಿತಾ ಕೆ., ರಕ್ಷಿತಾ ನಾಯಕ, ಅದಿತಿ ರಾಜೇಶ್‌ ಅವರೂ ಆನ್‌ಲೈನ್‌ ಮೂಲಕ ಫಿಟ್‌ನೆಸ್‌ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT