ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ಪಾಕ್ ಅಭಿಮಾನಿಗಳ ಲಗ್ಗೆ

Last Updated 24 ಮಾರ್ಚ್ 2019, 6:03 IST
ಅಕ್ಷರ ಗಾತ್ರ

ಕರಾಚಿ: ಪ್ರೀತಿಗೆ ಗಡಿ, ಭಾಷೆ, ದ್ವೇಷಗಳ ಹಂಗಿಲ್ಲ ಎನ್ನುವ ಮಾತಿಗೆ ಐಪಿಎಲ್‌ ಕ್ರಿಕೆಟ್‌ ಕೂಡ ಒಂದು ಉತ್ತಮ ಉದಾಹರಣೆ.

ಭಾರತ ಮತ್ತು ಪಾಕಿಸ್ತಾನ ದೇಶ ಗಳ ನಡುವೆ ರಾಜಕೀಯ ಭಿನ್ನಾಭಿಪ್ರಾ ಯಗಳು ಭುಗಿಲೆದ್ದಿರುವ ಈ ಸಮಯ ದಲ್ಲಿಯೂ ಐಪಿಎಲ್ ಪಂದ್ಯಗಳನ್ನು ನೋಡಲು ಪಾಕ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆದರೆ, ಪಾಕಿಸ್ತಾನ ಸರ್ಕಾರವು ಟಿವಿ ವಾಹಿನಿಗಳಲ್ಲಿ ಐಪಿಎಲ್‌ ಪ್ರಸಾರವನ್ನು ನಿರ್ಬಂಧಿಸಿದೆ.

ಆದರೆ ಅಲ್ಲಿಯ ಕ್ರಿಕೆಟ್‌ಪ್ರಿಯರು ಐಪಿಎಲ್ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿದ್ದಾರೆ.

‘ಭಾರತದಲ್ಲಿ ಪಿಎಸ್‌ಎಲ್ ಟೂರ್ನಿ ಯ ಪ್ರಸಾರವನ್ನು ನಿರ್ಬಂಧಿಸಲಾಗಿತ್ತು. ಅದಕ್ಕಾಗಿ ಪಾಕ್ ಸರ್ಕಾರವೂ ಐಪಿಎಲ್ ಪ್ರಸಾರವನ್ನು ನಿರ್ಬಂಧಿಸಿದೆ’ ಎಂದು ಪಾಕ್ ಟೆಸ್ಟ್‌ ತಂಡದ ಮಾಜಿ ಆಟಗಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT