ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ ಪ್ರಕಟ

Last Updated 9 ಫೆಬ್ರುವರಿ 2022, 13:36 IST
ಅಕ್ಷರ ಗಾತ್ರ

ಕರಾಚಿ: ಬಾಬರ್ ಆಜಂ ಅವರು ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಎರಡು ದಶಕಗಳ ನಂತರ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು ಟೆಸ್ಟ್ ಸರಣಿ 16 ಮಂದಿಯ ತಂಡವನ್ನು ಪಾಕ್ ಕ್ರಿಕೆಟ್ ಮಂಡಳಿ ಬುಧವಾರ ಪ್ರಕಟಿಸಿದೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಾರ್ಚ್ ನಾಲ್ಕರಂದು ರಾವಲ್ಪಿಂಡಿಯಲ್ಲಿ ನಡೆಯಲಿದ್ದು ಕರಾಚಿ ಮತ್ತು ಲಾಹೋರ್‌ನಲ್ಲಿ ಉಳಿದೆರಡು ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಕೊನೆಯದಾಗಿ 1998ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ನಂತರ ಭದ್ರತೆಯ ಕಾರಣದಿಂದ ಹೋಗಿರಲಿಲ್ಲ.

2009ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಉಂಟಾಗಿದ್ದ ಭಯೋತ್ಪಾದಕರ ದಾಳಿಯ ನಂತರ ಆ ದೇಶಕ್ಕೆ ಪ್ರವಾಸ ಕೈಗೊಳ್ಳಲು ಕ್ರಿಕೆಟ್ ತಂಡಗಳು ಹಿಂದೇಟು ಹಾಕುತ್ತಿದ್ದವು. ಹೀಗಾಗಿ ಪಾಕಿಸ್ತಾನ ತವರಿನ ಪಂದ್ಯಗಳನ್ನು ಯುಎಇಯಲ್ಲಿ ಆಡುತ್ತಿತ್ತು.

ಲೆಗ್‌ ಸ್ಪಿನ್ನರ್ ಯಾಸಿರ್ ಶಾ ಅವರನ್ನು ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಸೇರಿಸಿ ಆಯ್ಕೆ ಸಮಿತಿ ಅಚ್ಚರಿ ಮೂಡಿಸಿದೆ. ಆಟಗಾರರ ಸ್ಥಿರ ಪ್ರದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಮುಹಮ್ಮದ್ ವಾಸಿಂ ತಿಳಿಸಿದ್ದಾರೆ. ಶಾ ಇತ್ತೀಚೆಗೆ ಪಾಕಿಸ್ತಾನ ತಂಡದ ಪ್ರಮುಖ ಸ್ಪಿನ್ನರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ವರೆಗೆ 46 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 235 ವಿಕೆಟ್ ಗಳಿಸಿದ್ದಾರೆ.

ತಂಡ: ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ಉಪ ನಾಯಕ), ಅಬ್ದುಲ್ಲ ಶಫೀಕ್‌, ಅಜರ್ ಅಲಿ, ಫಾಹೀಮ್ ಅಶ್ರಫ್‌, ಫವಾದ್‌ ಆಲಂ, ಹ್ಯಾರಿಸ್‌ ರವೂಫ್‌, ಹಸನ್ ಅಲಿ, ಇಮಾಮ್ ಹುಲ್‌ ಹಕ್, ಮೊಹಮ್ಮದ್ ನವಾಜ್‌, ನೌಮನ್ ಅಲಿ, ಸಾಜಿದ್ ಖಾನ್‌, ಸೌದ್ ಶಕೀಲ್‌, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್‌, ಜಹೀದ್‌ ಮಹಮೂದ್‌. ಕಾಯ್ದಿರಿಸಿದ ಆಟಗಾರರು: ಕಮ್ರಾನ್ ಘುಲಾಮ್‌, ಮೊಹಮ್ಮದ್ ಅಬ್ಬಾಸ್‌, ನಸೀಮ್‌ ಶಾ, ಸರ್ಫರಾಜ್‌ ಅಹಮ್ಮದ್‌, ಯಾಸಿರ್ ಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT