ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಪಾರು: ಪಾಕಿಸ್ತಾನ ತಂಡ ಸೇರಲಿರುವ ಕಾಶಿಫ್ ಭಟಿ

Last Updated 16 ಜುಲೈ 2020, 13:36 IST
ಅಕ್ಷರ ಗಾತ್ರ

ಲಂಡನ್: ಕೋವಿಡ್‌–19ರ ಪರೀಕ್ಷೆಯಲ್ಲಿ ಎರಡು ಬಾರಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎಡಗೈ ಸ್ಪಿನ್ನರ್ ಕಾಶಿಫ್ ಭಟಿ ಅವರಿಗೆ ತಂಡವನ್ನು ಸೇರಲು ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ನಿಯಮಗಳ ಪ್ರಕಾರ ಎರಡು ಬಾರಿ ನೆಗೆಟಿವ್ ವರದಿ ಬಂದರೆ ಮಾತ್ರ ಆಟಗಾರರಿಗೆ ಕ್ರೀಡಾಂಗಣಕ್ಕೆ ಇಳಿಯಲು ಅವಕಾಶ ನೀಡಲಾಗುತ್ತದೆ.

ಮುಂದಿನ ಆಗಸ್ಟ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಾಗಿ ಮೂರು ತಂಡಗಳಲ್ಲಿ ಪಾಕಿಸ್ತಾನ ಆಟಗಾರರು ಇಲ್ಲಿಗೆ ಬಂದಿದ್ದಾರೆ. ಮೂರನೇ ತಂಡದಲ್ಲಿದ್ದ ಭಟಿ ಅವರ ಆರಂಭದ ಪರೀಕ್ಷಾ ವರದಿ ಪಾಸಿಟಿವ್ ಆಗಿತ್ತು. ಹೀಗಾಗಿ ಮತ್ತೆರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. 33 ವರ್ಷದ ಭಟಿ ಅವರು ವರ್ಸೆಸ್ಟರ್‌ನಲ್ಲಿರುವ ತಂಡವನ್ನು ಸೇರಲಿದ್ದಾರೆ.

ವಿಶೇಷವೆಂದರೆ, ಅವರನ್ನು ಪಾಕಿಸ್ತಾನದಲ್ಲಿ ಮೊದಲ ಬಾರಿ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಫಲಿತಾಂಶ ಬಂದಿತ್ತು. ನಂತರ ಎರಡು ಬಾರಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ತಡವಾಗಿ ಇಂಗ್ಲೆಂಡ್‌ಗೆ ಕಳುಹಿಸಲಾಗಿತ್ತು. ಇಲ್ಲಿಯೂ ಮೊದಲ ಪರೀಕ್ಷೆಯ ವರದಿ ಪಾಸಿಟಿವ್ ಆಗಿತ್ತು. ಆದ್ದರಿಂದ ಪ್ರತ್ಯೇಕ ವಾಸಕ್ಕೆ ಕಳುಹಿಸಲಾಗಿತ್ತು. ಈಗ ನಿರಾಳವಾಗಿದ್ದಾರೆ.

’ಪಾಕಿಸ್ತಾನದಲ್ಲಿದ್ದಾಗ ಉಂಟಾದ ಸೋಂಕಿನಿಂದಾಗಿ ಇಲ್ಲಿಯೂ ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಆರೋಗ್ಯ ಅಧಿಕಾರಿ ಮತ್ತು ವೈರಾಣು ತಜ್ಞರ ಅಭಿಪ್ರಾಯ ಪಡೆದು ಪ್ರತ್ಯೇಕವಾಸದಲ್ಲಿ ಇರುವಂತೆ ಅವರಿಗೆ ಸೂಚಿಸಲಾಗಿತ್ತು. ಮತ್ತೆ ಎರಡು ಬಾರಿ ನಡೆಸಿದ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ‘ ಎಂದು ಇಸಿಬಿ ವಕ್ತಾರ ತಿಳಿಸಿದರು.

ಹೈದರ್ ಅಲಿ ಮತ್ತು ಇಮ್ರಾನ್ ಖಾನ್ ಜೊತೆ ಭಟಿ ಅವರು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಇವರೆಲ್ಲರ ಮೊದಲ ವರದಿಯೂ ಪಾಸಿಟಿವ್ ಆಗಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ ಐದರಂದು ಆರಂಭವಾಗಲಿದ್ದು ತಂಡ ಈಗ ಬಯೋಸೆಕ್ಯೂರ್ ವಲಯದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT