ಕೊಲಂಬೊ: ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಎರಡನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಮಂಗಳವಾರ ಬಹುಪಾಲು ಆಟ ಮಳೆಗೆ ಕೊಚ್ಚಿಹೋಯಿತು. 10 ಓವರುಗಳ ಆಟವಷ್ಟೇ ಸಾಧ್ಯವಾಗಿದ್ದು, ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 12 ರನ್‌ಗಳ ಮುನ್ನಡೆ ಪಡೆದಿದೆ.
ಆತಿಥೇಯರ 166 ರನ್ನಿಗೆ ಉತ್ತರವಾಗಿ ಸೋಮವಾರ ಆಟ ಮುಗಿದಾಗ 2 ವಿಕೆಟ್‌ಗೆ 145 ರನ್ ಗಳಿಸಿದ್ದ ಪಾಕ್ ತಂಡ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಎರಡನೇ ದಿನದ ಕೊನೆಗೆ 2 ವಿಕೆಟ್‌ಗೆ 178 ರನ್ ಗಳಿಸಿದೆ. ಬೆಳಿಗ್ಗೆ ಕೆಲಕಾಲ ಆಷ್ಟೆ ಆಟ ಸಾಧ್ಯವಾಯಿತು. ಲಂಚ್ ಮತ್ತು ಚಹ ವಿರಾಮದ ಮಧ್ಯ ಮತ್ತು ನಂತರ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು.
ಆರಂಭ ಆಟಗಾರ ಅಬ್ದುಲ್ಲಾ ಶಫೀಖ್ 87 ರನ್ ಮತ್ತು ನಾಯಕ ಬಾಬರ್ ಆಜಂ 28 ರನ್ ಗಳಿಸಿದ್ದು, ಬುಧವಾರ ಮೂರನೇ ದಿನದಾಟ ಮುಂದುವರಿಸುವರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.