ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವಲ್ಪಿಂಡಿಯಲ್ಲಿ ಪಾಕ್ ಬ್ಯಾಟರ್‌ಗಳ ಸಂಭ್ರಮ

ಟೆಸ್ಟ್ ಕ್ರಿಕೆಟ್: ಮುನ್ನಡೆಯ ನಿರೀಕ್ಷೆಯಲ್ಲಿ ಇಂಗ್ಲೆಂಡ್‌; ಇಮಾಮ್, ಶಫೀಕ್, ಬಾಬರ್ ಶತಕ
Last Updated 3 ಡಿಸೆಂಬರ್ 2022, 16:23 IST
ಅಕ್ಷರ ಗಾತ್ರ

ರಾವಲ್ಪಿಂಡಿ (ಎಎಫ್‌ಪಿ): ಪಾಕಿಸ್ತಾನದ ಮೂವರು ಬ್ಯಾಟರ್‌ಗಳು ಶತಕ ಗಳಿಸುವ ಮೂಲಕ ಪ್ರವಾಸಿ ಇಂಗ್ಲೆಂಡ್‌ಗೆ ದಿಟ್ಟ ತಿರುಗೇಟು ನೀಡಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಪಾಕ್ ತಂಡವು 136 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 499 ರನ್‌ ಗಳಿಸಿತು. ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 657 ರನ್‌ ಗಳಿಸಿತ್ತು. ಮೊದಲ ದಿನವೇ ನಾಲ್ವರು ಬ್ಯಾಟರ್‌ಗಳು ಶತಕ ಬಾರಿಸಿದ್ದರು.

ಅದಕ್ಕುತ್ತರವಾಗಿ ಆತಿಥೇಯ ತಂಡದ ಅಬ್ಚುಲ್ಲಾ ಶಫೀಕ್ (114; 203ಎ, 4X13, 3X6), ಇಮಾಮ್ ಉಲ್ ಹಕ್ (121; 207ಎ, 4X15, 6X2) ಹಾಗೂ ನಾಯಕ ಬಾಬರ್ ಆಜಂ (136; 168ಎ, 4X19, 6X1) ಶತಕ ದಾಖಲಿಸಿದರು.

ಆರಂಭಿಕ ಜೋಡಿ ಶಫೀಕ್ ಮತ್ತು ಇಮಾಮ್ ಮೊದಲ ವಿಕೆಟ್ ಜೊತೆಯಾಟದಲ್ಲಿ 225 ರನ್ ಗಳಿಸಿದರು. ವಿಲ್ ಜ್ಯಾಕ್ಸ್‌ ಬೌಲಿಂಗ್‌ನಲ್ಲಿ ಶಫೀಕ್ ಔಟಾದರು. ಇದರೊಂದಿಗೆ ಜೊತೆಯಾಟ ಮುರಿಯಿತು. ಸ್ವಲ್ಪ ಹೊತ್ತಿನ ನಂತರ ಇಮಾಮ್ ಕೂಡ ಔಟಾದರು. ಅಜರ್ ಅಲಿ ಕೂಡ ಬೇಗನೆ ಔಟಾದರು.

ಈ ಹಂತದಲ್ಲಿ ನಾಯಕ ಬಾಬರ್ ಚೆಂದದ ಬ್ಯಾಟಿಂಗ್ ಮಾಡಿದರು. ಆದರೆ ಇನ್ನೊಂದು ಬದಿಯಲ್ಲಿ ವಿಕೆಟ್‌ಗಳನ್ನು ಉರುಳಿಸುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಯಶಸ್ವಿಯಾದರು. ಪಾಕ್ ತಂಡವು ಇಂಗ್ಲೆಂಡ್‌ನ ಮೊತ್ತವನ್ನು ಚುಕ್ತಾ ಮಾಡಲು ಇನ್ನೂ 158 ರನ್‌ ಗಳಿಸಬೇಕಿದೆ. ಆದರೆ, ಭಾನುವಾರ ಬೆಳಿಗ್ಗೆಯೇ ಮೂರು ವಿಕೆಟ್‌ಗಳನ್ನು ಕಿತ್ತು ದೊಡ್ಡ ಮುನ್ನಡೆ ಗಳಿಸುವ ಛಲದಲ್ಲಿ ಪ್ರವಾಸಿ ತಂಡವಿದೆ.

ಈ ಅಂಗಳದಲ್ಲಿ ಇದುವರೆಗೆ ಒಟ್ಟು 1156 ರನ್‌ಗಳು ದಾಖಲಾಗಿವೆ. ಅದರಲ್ಲಿ ಒಟ್ಟು ಏಳು ಶತಕಗಳು ಸೇರಿವೆ!

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 101 ಓವರ್‌ಗಳಲ್ಲಿ 657. ಪಾಕಿಸ್ತಾನ: 136 ಓವರ್‌ಗಳಲ್ಲಿ 7ಕ್ಕೆ499 (ಅಬ್ದುಲ್ಲಾ ಶಫೀಕ್ 114, ಇಮಾಮ್ ಉಲ್ ಹಕ್ 121, ಬಾಬರ್ ಆಜಂ 136, ಸೌದ್ ಶಕೀಲ್ 37, ಮೊಹಮ್ಮದ್ ರಿಜ್ವಾನ್ 29, ಜ್ಯಾಕ್ ಲೀಚ್ 160ಕ್ಕೆ2, ವಿಲ್ ಜ್ಯಾಕ್ಸ್ 132ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT