ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಹರಿದ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು

ಭಾನುವಾರ, ಜೂಲೈ 21, 2019
22 °C

ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಹರಿದ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು

Published:
Updated:

ಲಾರ್ಡ್ಸ್‌, ಲಂಡನ್: ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ನಡೆಯುತ್ತಿರುವ ಲಾರ್ಡ್ಸ್‌ ಕ್ರೀಡಾಂಗಣದ ಹೊರಗೆ ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ಗಳನ್ನು ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳು ಹರಿದು ಹಾಕಿದ್ದಾರೆ.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹ್ಯಾರಿಸ್ ಸೊಹೈಲ್ ಮತ್ತು ಬಾಬರ್ ಅಜಂ ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಜಯಭೇರಿ ಬಾರಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಬ್ಯಾಟಿಂಗ್ ಮಾಡಿತು. 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 308 ರನ್‌ ಗಳಿಸಿತು. ಅದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 259 ರನ್ ಗಳಿಸಿತು. ಪಾಕ್ 49 ರನ್‌ಗಳಿಂದ ಗೆದ್ದಿತು. ಹೋದ ಪಂದ್ಯದಲ್ಲಿ ಪಾಕ್ ಬಳಗವು ಭಾರತದ ಎದುರು ಸೋತಿತ್ತು.

ಈಚೆಗೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಜಯಗಳಿಸಿತ್ತು. ಈ ವೇಳೆ ಬಲೂಚ್ ಮಾನವ ಹಕ್ಕುಗಳ ಕಾರ್ಯಕರ್ತರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಪಾಕ್‌ ವಿರುದ್ಧದ ಭಾರತದ ಜಯವನ್ನು ಸಂಭ್ರಮಿಸಿದ್ದರು.


ಕ್ರೀಡಾಂಗಣದ ಹೊರಗೆ ಹಾಕಿದ್ದ ಪೋಸ್ಟರ್‌ಗಳು

 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 2

  Sad
 • 0

  Frustrated
 • 19

  Angry

Comments:

0 comments

Write the first review for this !