ಪಾಂಡ್ಯ ಬಗ್ಗೆ ಫ್ಲೆಮಿಂಗ್ ಮೆಚ್ಚುಗೆ

ಮಂಗಳವಾರ, ಏಪ್ರಿಲ್ 23, 2019
32 °C

ಪಾಂಡ್ಯ ಬಗ್ಗೆ ಫ್ಲೆಮಿಂಗ್ ಮೆಚ್ಚುಗೆ

Published:
Updated:
Prajavani

ಮುಂಬೈ : ಆಲ್‌ರೌಂಡ್‌ ಆಟದ ಮೂಲಕ ಬುಧವಾರ ಮುಂಬೈಗೆ ಗೆಲುವು ತಂದುಕೊಟ್ಟ ಹಾರ್ದಿಕ್‌ ಪಾಂಡ್ಯ ಬಗ್ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಹಾರ್ದಿಕ್‌ ‍ಪ್ರತಿಭಾನ್ವಿತ ಆಟಗಾರ. ನಾನು ಅವರ ದೊಡ್ಡ ಅಭಿಮಾನಿ. ಅವರಲ್ಲಿ ಅದಮ್ಯ ವಿಶ್ವಾಸ ಇದೆ. ಅಂತಿಮ ಓವರ್‌ಗಳಲ್ಲಿ ಸ್ಫೋಟಕ ಆಟದ ಮೂಲಕ ರನ್‌ ಮಳೆ ಸುರಿಸುವುದೇ ಇದಕ್ಕೆ ಸಾಕ್ಷಿ’ ಎಂದಿದ್ದಾರೆ.

‘ಹಾರ್ದಿಕ್‌, ಮುಂಬೈ ತಂಡದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ವಿಶ್ವ ಶ್ರೇಷ್ಠ ಬೌಲರ್‌ಗಳ ಸದ್ದಡಗಿಸುವ ತಾಕತ್ತು ಅವರಲ್ಲಿದೆ’ ಎಂದು ಪ್ರಶಂಶಿಸಿದ್ದಾರೆ.

‘ಮುಂಬೈ ಎದುರು ಆರಂಭದಲ್ಲಿ ನಮ್ಮ ಬೌಲರ್‌ಗಳು ತುಂಬಾ ಚೆನ್ನಾಗಿ ಬೌಲ್ ಮಾಡಿದ್ದರು. ಆದರೆ ಕೊನೆಯ ನಾಲ್ಕು ಓವರ್‌ಗಳಲ್ಲಿ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದು  ಮುಳುವಾಯಿತು’ ಎಂದು ಫ್ಲೆಮಿಂಗ್‌ ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !