ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಆಯ್ಕೆ ಸಮಿತಿಗಿಲ್ಲ ಅಧ್ಯಕ್ಷ

ಸದಸ್ಯರಿಗೇ ಅಧಿಕಾರ
Published 24 ಮಾರ್ಚ್ 2024, 13:45 IST
Last Updated 24 ಮಾರ್ಚ್ 2024, 13:45 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತನ್ನ ಆಯ್ಕೆ ಸಮಿತಿಯನ್ನು ಪುನರ್ರಚಿಸಿದೆ. ಆದರೆ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಬದಲು ಆಯ್ಕೆಗಾರರಿಗೆ ರಾಷ್ಟ್ರೀಯ ತಂಡದ ನಾಯಕ ಮತ್ತು ಮುಖ್ಯ ಕೋಚ್ ಅವರನ್ನು ಆಯ್ಕೆ ಮಾಡುವ ಅಧಿಕಾರ ನೀಡಿದೆ.

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಅವರು ಭಾನುವಾರ ಇಲ್ಲಿ ನಾಲ್ವರು ಆಯ್ಕೆಗಾರರ– ಮೊಹಮ್ಮದ್ ಯೂಸುಫ್‌, ಅಬ್ದುಲ್ ರಝಾಕ್, ಅಸದ್‌ ಶಫೀಕ್ ಮತ್ತು ವಹಾಬ್ ರಿಯಾಜ್– ಸಮ್ಮುಖದಲ್ಲಿ ಈ ಘೋಷಣೆ ಮಾಡಿದರು.

ಹೊಸ ಆಯ್ಕೆ ಸಮಿತಿಯು ತಂಡದ ನಾಯಕ, ಹೆಡ್‌ ಕೋಚ್‌ ಮತ್ತು ಡೇಟಾ ಅನಾಲಿಸ್ಟ್‌ ಸೇರಿ ಏಳು ಮಂದಿಯನ್ನು ಹೊಂದಿರಲಿದೆ ಎಂದು ನಕ್ವಿ ಹೇಳಿದರು.

ಸಮಿತಿಗೆ ಅಧ್ಯಕ್ಷರಿರುವುದಿಲ್ಲ. ಸದಸ್ಯರೇ ಎಲ್ಲ ನಿರ್ಧಾರವನ್ನು ಬಹುಮತದ ಅಥವಾ ಸರ್ವಾನುಮತದಲ್ಲಿ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಹಳೆ ಸಮಿತಿಯನ್ನು ವಿಸರ್ಜಿಸಿದ ಕೆಲವೇ ಗಂಟೆಗಳಲ್ಲಿ ಹೊಸ ಸಮಿತಿಯನ್ನು ಪ್ರಕಟಿಸಲಾಗಿದೆ. ‘ಎಲ್ಲ ಆಯ್ಕೆಗಾರರು ವೃತ್ತಿಪರರರು. ಅವರೇ ನಾಯಕನನ್ನು ಆಯ್ಕೆ ಮಾಡುತ್ತಾರೆ. ಹೊಸ ತರಬೇತಿ ತಂಡವನ್ನೂ ಅವರೇ ನಿರ್ಧರಿಸಲಿದ್ದಾರೆ’ ಎಂದರು.

ಯೂಸುಫ್‌, ರಝಾಕ್, ವಹಾಬ್ ಈ ಹಿಂದೆ ಆಯ್ಕೆಗಾರರಾಗಿ ಅನುಭವ ಹೊಂದಿದ್ದಾರೆ. ಟೆಸ್ಟ್‌ ಬ್ಯಾಟರ್ ಅಸದ್‌ಗೆ ಇದೇ ಮೊದಲ ಬಾರಿ ಈ ಹೊಣೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT