7

ಹರ್ಮನ್‌ಪ್ರೀತ್‌ ಪದವಿ ಪ್ರಮಾಣಪತ್ರ ನಕಲಿ: ಡಿಸಿಪಿಯಿಂದ ಕಾನ್‌ಸ್ಟೆಬಲ್‌!

Published:
Updated:
ಭಾರತ ಟಿ20 ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌

ಚಂಡೀಗಢ: ನಕಲಿ ಪದವಿ ಪ್ರಮಾಣಪತ್ರ ಸಲ್ಲಿಕೆ ಸಂಬಂಧ ಭಾರತದ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಪಂಜಾಬ್‌ ಡಿಸಿಪಿ ಹುದ್ದೆ ಕಳೆದುಕೊಂಡಿದ್ದಾರೆ. 

ಅರ್ಜುನ ಪ್ರಶಸ್ತಿ ಪುರಸ್ಕೃತೆ ಕ್ರಿಕೆಟ್ ಆಟಗಾರ್ತಿ ಹಮರ್ನ್‌ಪ್ರೀತ್‌ ಪಂಜಾಬ್‌ ಸರ್ಕಾರಕ್ಕೆ ಸಲ್ಲಿಸಿರುವ ಪ್ರಮಾಣಪತ್ರ ನಕಲಿ ಎಂದು ಪೊಲೀಸ್‌ ತನಿಖೆಯಲ್ಲಿ ದೃಢಪಟ್ಟಿದ್ದು, ಸರ್ಕಾರ ನೀಡಿದ್ದ ಡಿಸಿಪಿ ಸ್ಥಾನವನ್ನು ಹಿಂಪಡೆದಿದೆ. ವಿದ್ಯಾರ್ಹತೆ ಆಧಾರದಲ್ಲಿ ಅವರಿಗೆ ಕಾನ್‌ಸ್ಟೆಬಲ್‌ ಹುದ್ದೆಯಷ್ಟೇ ನೀಡಲು ಸಾಧ್ಯವಿದೆ.  

’ಮೀರತ್‌ನ ಚೌಧರಿ ಚರಣ್‌ ಸಿಂಗ್‌ ವಿಶ್ವವಿದ್ಯಾಲಯದಿಂದ ಪಡೆದಿರುವ ಪದವಿ ನಕಲಿ ಎಂಬುದು ತನಗೂ ತಿಳಿದಿರಲಿಲ್ಲ. ನನ್ನ ಕೋಚ್‌ ಆ ವಿಶ್ವವಿದ್ಯಾಲಯದಲ್ಲಿ ನೋಂದಣಿ ಮಾಡಿಸಿದ್ದರು. ಪರೀಕ್ಷೆಗಳ ಬಗೆಗೆ ಅಲ್ಲಿ ಹೆಚ್ಚು ಕಠಿಣವಾಗಿರುವುದಿಲ್ಲ ಎಂದಿದ್ದರು. ಆದರೆ, ನಕಲಿ ಪ್ರಮಾಣಪತ್ರದ ಬಗ್ಗೆ ತಿಳಿದಿರಲಿಲ್ಲ’ ಎಂದು ಹರ್ಮನ್‌ಪ್ರೀತ್‌ ಸರ್ಕಾರಕ್ಕೆ ತಿಳಿಸಿದ್ದಾರೆ. ವಿದ್ಯಾರ್ಹತೆಯ ಆಧಾರದ ಮೇಲೆ ಅವರನ್ನು ಕಾನ್‌ಸ್ಟೆಬಲ್‌ ಆಗಿ ನೇಮಿಸಿ ಶೈಕ್ಷಣಿಕ ವಿದ್ಯಾರ್ಹತೆ ಪೂರ್ಣಗೊಳಿಸಿದ ಬಳಿಕ ಡಿಸಿಪಿ ಹುದ್ದೆಗೆ ಬಡ್ತಿ ನೀಡುವ ಬಗ್ಗೆ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ನಿರ್ಧರಿಸಿದ್ದಾಗಿ ಪಂಜಾಬ್‌ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. 

ಕಳೆದ ವರ್ಷ ಮಹಿಳಾ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಸಾಧನೆ ಗಮನಿಸಿ ಪಂಜಾಬ್‌ ಸರ್ಕಾರ 2017ರ ಜುಲೈನಲ್ಲಿ ಪೊಲೀಸ್‌ ಡಿಸಿಪಿ ಹುದ್ದೆ ನೀಡಿತ್ತು. ಅವರ ಪದವಿ ಪ್ರಮಾಣಪತ್ರಗಳ ಪರಿಶೀಲನೆಗಾಗಿ ಪೊಲೀಸ್‌ ಇಲಾಖೆ ಮೀರತ್‌ ವಿಶ್ವವಿದ್ಯಾಲಯಕ್ಕೆ ಕಳುಹಿಸಿತ್ತು. ಪೊಲೀಸ್‌ ಇಲಾಖೆಗೆ ಸೇರುವುದಕ್ಕೂ ಮುನ್ನ ಹರ್ಮನ್‌ಪ್ರೀತ್‌ ಪಶ್ಚಿಮ ರೈಲ್ವೆಯಲ್ಲಿ ಕಚೇರಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರೈಲ್ವೆ ಇಲಾಖೆಯೊಂದಿಗೆ ಐದು ವರ್ಷಗಳ ಕಾಂಟ್ರಾಕ್ಟ್‌ ಸಹಿ ಮಾಡಿದ್ದ ಅವರು ಪಂಜಾಬ್‌ ಸರ್ಕಾರ ಹುದ್ದೆಗೆ ಸೇರ್ಪಡೆಯಾಗಿದ್ದು, ಇದೇ ವರ್ಷ ಫೆಬ್ರುವರಿಯಲ್ಲಿ. ಸಿಎಂ ಅಮರಿಂದರ್‌ ಸಿಂಗ್‌ ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ಹರ್ಮನ್‌ಪ್ರೀತ್‌ರನ್ನು ತನ್ನ ಸರ್ಕಾರದಲ್ಲಿ ಡಿಸಿಪಿ ಹುದ್ದೆಗೆ ನೇಮಿಸಿದ್ದರು. 

 

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !