ಭಾನುವಾರ, ಆಗಸ್ಟ್ 14, 2022
25 °C

ಪಂದ್ಯ ಫಿಕ್ಸಿಂಗ್: ರವೀಂದ್ರ ದಾಂಡಿವಾಲ್ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ ಚೆಂಡು– ಸಾಂದರ್ಭಿಕ ಚಿತ್ರ

ಚಂಡಿಗಡ: ಕ್ರಿಕೆಟ್ ಪಂದ್ಯದಲ್ಲಿ ಮೋಸದಾಟ ನಡೆಸಿದ ಆರೋಪದಲ್ಲಿ ರವೀಂದ್ರ ದಾಂಡಿವಾಲ್ ಎಂಬ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ಹೋದ ತಿಂಗಳು ಮೊಹಾಲಿ ಸಮೀಪದ ಗ್ರಾಮವೊಂದರಲ್ಲಿ ಟಿ20 ಪಂದ್ಯವನ್ನು ಆಯೋಜಿಸಲಾಗಿತ್ತು. ಅದನ್ನು ಶ್ರೀಲಂಕಾದಲ್ಲಿ ನಡೆದಿದ್ದ ಲೀಗ್ ಪಂದ್ಯವೆಂದು ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿತ್ತು. ಆದರೆ ಪಂಜಾಬ್ ಪೊಲೀಸ್ ಇಲಾಖೆ ಮತ್ತು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಪಡೆಯು ನಡೆಸಿದ ತನಿಖೆಯಲ್ಲಿ ಸತ್ಯ ಬಹಿರಂಗವಾಯಿತು.

’ಈ ಪಂದ್ಯದ ಹಿಂದೆ ಬೆಟ್ಟಿಂಗ್ ಜಾಲ ಇರುವ ಸಂಶಯ ಇತ್ತು. ದಾಂಡಿವಾಲ್ ಇದರ ಕಿಂಗ್‌ಪಿನ್. ಆತನನ್ನು ಸೋಮವಾರ ಬಂಧಿಸಲಾಗಿದೆ‘ ಎಂದು ಪೊಲೀಸ್ ಅಧಿಕಾರಿ ಪಾಲ್ ಸಿಂಗ್ ಹೇಳಿದ್ದಾರೆ.

ಮೂಲತಃ ರಾಜಸ್ಥಾನದ  ದಾಂಡಿವಾಲ್, ಈ ಹಿಂದೆಯೂ ಇಂತಹ ಬೆಟ್ಟಿಂಗ್ ನಡೆಸಲೆಂದೇ  ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು