ರಾಹುಲ್ ದ್ರಾವಿಡ್‌ಗೆ ಹಾಲ್ ಆಫ್ ಫೇಮ್‌

7

ರಾಹುಲ್ ದ್ರಾವಿಡ್‌ಗೆ ಹಾಲ್ ಆಫ್ ಫೇಮ್‌

Published:
Updated:
Deccan Herald

ತಿರುವನಂತಪುರ: ಮಹಾಗೋಡೆ ಎಂದೇ ಹೆಸರಾಗಿರುವ ಬ್ಯಾಟ್ಸ್‌ಮನ್, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಈಗ ಕ್ರಿಕೆಟ್‌ನ ಹಾಲ್ ಆಫ್ ಫೇಮ್‌. ಇಲ್ಲಿ ಗುರುವಾರ ನಡೆದ ಸರಳ ಕಾರ್ಯಕ್ರಮವೊಂದರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಅವರಿಗೆ ಈ ಗೌರವ ನೀಡಿ ಸನ್ಮಾನಿಸಿತು.

ಐಸಿಸಿಯ ಈ ಗೌರವಕ್ಕೆ ಪಾತ್ರರಾದ ಭಾರತದ ಐದನೇ ಆಟಗಾರ ದ್ರಾವಿಡ್‌. ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್‌, ಸುನಿಲ್ ಗಾವಸ್ಕರ್‌ ಮತ್ತು ಅನಿಲ್ ಕುಂಬ್ಳೆ ಅವರು ಈ ಹಿಂದೆ ಹಾಲ್ ಆಫ್ ಫೇಮ್ ಆಗಿದ್ದರು. ಕಳೆದ ಜುಲೈ ಎರಡರಂದು ಈ ಗೌರವಕ್ಕೆ ದ್ರಾವಿಡ್ ಅವರನ್ನು ಐಸಿಸಿ ಆಯ್ಕೆ ಮಾಡಿತ್ತು. 164 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಹುಲ್‌ 36 ಶತಕಗಳು ಒಳಗೊಂಡಂತೆ 13,288 ರನ್‌ ಕಲೆ ಹಾಕಿದ್ದರು. 344 ಏಕದಿನ ಪಂದ್ಯಗಳಲ್ಲಿ ಅವರು 12 ಶತಕ ಗಳಿಸಿದ್ದು 10,889 ರನ್‌ ಗಳಿಸಿದ್ದಾರೆ. ಸ್ಲಿಪ್‌ನಲ್ಲಿ ಚುರುಕಿನ ಫೀಲ್ಡಿಂಗ್‌ಗೆ ಹೆಸರಾಗಿದ್ದ ರಾಹುಲ್‌ 210 ಕ್ಯಾಚ್‌ ಪಡೆದಿದ್ದಾರೆ. ಅದು ವಿಶ್ವ ದಾಖಲೆಯಾಗಿದೆ.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !