ಶಿವಮೊಗ್ಗ: ಡಿ.ನಿಶ್ಚಲ್ ಗಳಿಸಿದ ಆಕರ್ಷಕ ಶತಕ, ಕೆ.ವಿ.ಸಿದ್ದಾರ್ಥ್ ಮತ್ತು ದೇವದತ್ತ ಪಡಿಕ್ಕಲ್ ಅವರ ಸೊಗಸಾದ ಆಟದ ಬಲದಿಂದ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ಕರ್ನಾಟಕ ಎರಡು ವಿಕೆಟ್ಗೆ 290 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಗೆಲುವಿಗೆ 362 ರನ್ಗಳ ಗುರಿ ಪಡೆದಿರುವ ರೈಲ್ವೇಸ್ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ಗೆ 44 ರನ್ ಗಳಿಸಿದೆ. ಮಂಗಳವಾರ ಕೊನೆಯ ದಿನವಾಗಿದ್ದು, ರೈಲ್ವೇಸ್ ಗೆಲುವಿಗೆ 318ರನ್ಗಳು ಹಾಗೂ ಕರ್ನಾಟಕದ ಜಯಕ್ಕೆ 9 ವಿಕೆಟ್ಗಳು ಬೇಕಿವೆ.

ವಿಕೆಟ್ ನಷ್ಟವಿಲ್ಲದೆ 41 ರನ್ಗಳಿಂದ ಸೋಮವಾರ ಆಟ ಮುಂದುವರಿಸಿದ ಕರ್ನಾಟಕ ತಂಡವನ್ನು ನಿಶ್ಚಲ್ (101, 232 ಎ, 7 ಬೌಂ), ಸಿದ್ದಾರ್ಥ್ (ಔಟಾಗದೆ 84, 86 ಎ, 6 ಬೌಂ, 3 ಸಿ) ಮತ್ತು ಪಡಿಕ್ಕಲ್ (75, 159 ಎ, 5 ಬೌಂ, 1 ಸಿ) ಅವರು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಭರ್ಜರಿ ಆರಂಭ: ಕ್ರಮವಾಗಿ 11 ಮತ್ತು 25 ರನ್ಗಳಿಂದ ಸೋಮವಾರ ಆಟ ಮುಂದುವರಿಸಿದ ಪಡಿಕ್ಕಲ್ ಹಾಗೂ ನಿಶ್ಚಲ್ ಮೊದಲ ವಿಕೆಟ್ಗೆ 150 ರನ್ಗಳ ಭರ್ಜರಿ ಜತೆಯಾಟ ನೀಡಿದರು. ಆರಂಭದ ಒಂದು ಗಂಟೆ ಎಚ್ಚರಿಕೆಯಿಂದ ಆಡಿದ ಈ ಜೋಡಿ ಬಳಿಕ ಲೀಲಾಜಾಲವಾಗಿ ರನ್ ಪೇರಿಸಿತು.

ತಾವೆದುರಿಸಿದ 77ನೇ ಎಸೆತದಲ್ಲಿ ಮೊದಲ ಬೌಂಡರಿ ಗಳಿಸಿದ ಪಡಿಕ್ಕಲ್ ಆ ಬಳಿಕ ಮೈದಾನದ ಮೂಲೆಮೂಲೆಗೂ ಚೆಂಡನ್ನಟ್ಟಿದರು. ಇಬ್ಬರೂ ಬೆನ್ನುಬೆನ್ನಿಗೆ ಅರ್ಧಶತಕ ಪೂರೈಸಿದರು. ಭೋಜನ ವಿರಾಮದ ವೇಳೆಗೆ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 137 ರನ್ ಗಳಿಸಿತ್ತು.

ಎರಡನೇ ಅವಧಿಯ ಏಳನೇ ಓವರ್ನಲ್ಲಿ ರೈಲ್ವೇಸ್ಗೆ ಮೊದಲ ಯಶಸ್ಸು ಲಭಿಸಿತು. ದೇವದತ್ತ ಅವರು ಹರ್ಷ್ ತ್ಯಾಗಿ ಬೌಲಿಂಗ್ನಲ್ಲಿ ರಿಟರ್ನ್ ಕ್ಯಾಚ್ ನೀಡಿ ಔಟಾದರು. ರಣಜಿ ಟೂರ್ನಿಯಲ್ಲಿ ಚೊಚ್ಚಲ ಶತಕ ಗಳಿಸುವ ಅದೃಷ್ಟ ಅವರಿಗಿರಲಿಲ್ಲ. ಈ ಹಿಂದೆ ಗುಜರಾತ್ ಮತ್ತು ಮಹಾರಾಷ್ಟ್ರ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ 74 ಹಾಗೂ 77 ರನ್ ಗಳಿಸಿ ಔಟಾಗಿದ್ದರು.

ಶತಕ ಸಂಭ್ರಮ: ಪಡಿಕ್ಕಲ್ ಔಟಾದ ಬಳಿಕ ಜತೆಯಾದ ನಿಶ್ಚಲ್ ಮತ್ತು ಸಿದ್ದಾರ್ಥ್ ವೇಗವಾಗಿ ರನ್ ಗಳಿಸಿದರು. ನಿಶ್ಚಲ್ ಒಂದು, ಎರಡು ರನ್ಗಳಿಗೆ ಒತ್ತು ನೀಡಿದರೆ, ಸಿದ್ದಾರ್ಥ್ ಆರಂಭದಿಂದಲೇ ಬಿರುಸಿನ ಆಟಕ್ಕಿಳಿದರು. ಹರ್ಷ್ ತ್ಯಾಗಿ ಬೌಲಿಂಗ್ನಲ್ಲಿ ಸೊಗಸಾದ ಎರಡು ಸಿಕ್ಸರ್ಗಳನ್ನು ಸಿಡಿಸಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದರು. ಅವರು 57 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಏನೇ ಆದರೂ ವಿಕೆಟ್ ಬಿಟ್ಟುಕೊಡಬಾರದು ಎಂದು ದೃಢನಿಶ್ಚಯ ಮಾಡಿಕೊಂಡಿದ್ದ ನಿಶ್ಚಲ್ ಎದುರಾಳಿ ಬೌಲರ್ಗಳ ವಿರುದ್ಧ ಪೂರ್ಣ
ಪ್ರಭುತ್ವ ಸಾಧಿಸಿದರು. ಲೋಪವಿಲ್ಲದ ಇನಿಂಗ್ಸ್ ಕಟ್ಟಿದ ಅವರು ಸ್ಪಿನ್ನರ್ ಅವಿನಾಶ್ ಯಾದವ್ ಬೌಲಿಂಗ್ನಲ್ಲಿ ಚೆಂಡನ್ನು ಕವರ್ಸ್ನತ್ತ ಕಟ್ ಮಾಡಿ ಬೌಂಡರಿ ಗಿಟ್ಟಿಸಿ ಮೂರಂಕಿಯ ಗಡಿ ದಾಟಿದರು.

ಶತಕ ಪೂರೈಸಿದ ಬಳಿಕ ಅವರು ಅಧಿಕ ಹೊತ್ತು ನಿಲ್ಲಲಿಲ್ಲ. ಚಹಾ ವಿರಾಮದ ಬಳಿಕದ ಮೊದಲ ಎಸೆತದಲ್ಲಿ ಔಟಾದರು. ಎರಡನೇ ವಿಕೆಟ್ಗೆ 137 ಎಸೆತಗಳಲ್ಲಿ 94ರನ್ಗಳು ಬಂದವು.

ದಿನದ ಮೊದಲ ಅವಧಿಯಲ್ಲಿ ಕರ್ನಾಟಕ 33 ಓವರ್ಗಳಲ್ಲಿ 96 ರನ್ ಕಲೆಹಾಕಿದರೆ, ಎರಡನೇ ಅವಧಿಯಲ್ಲಿ 29 ಓವರ್ಗಳಲ್ಲಿ 107 ರನ್ ಪೇರಿಸಿತು.

ಅಚ್ಚರಿಯ ನಿರ್ಧಾರ: ಸಿದ್ದಾರ್ಥ್ ಬಿರುಸಿನಿಂದ ರನ್ ಗಳಿಸುತ್ತಿದ್ದರೂ ಅವರ ಶತಕಕ್ಕೆ ಕಾಯದೆ ಕರ್ನಾಟಕ ಇನಿಂಗ್ಸ್ ಡಿಕ್ಲೇರ್ ಮಾಡಿದ್ದು ಅಚ್ಚರಿ ಉಂಟುಮಾಡಿತು. ಈ ಬಲಗೈ ಬ್ಯಾಟ್ಸ್ಮನ್ ಮೊದಲ ಇನಿಂಗ್ಸ್ನಲ್ಲಿ 69 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

ಋತುವಿನ ಎರಡನೇ ಶತಕ

ನಿಶ್ಚಲ್ ಅವರು ಈ ರಣಜಿ ಋತುವಿನ ಎರಡನೇ ಶತಕ ಗಳಿಸಿದರು. ವಿದರ್ಭ ವಿರುದ್ಧ ನಾಗಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಅವರು 113 ರನ್ ಪೇರಿಸಿದ್ದರು. ಎರಡು ಶತಕಗಳ ಜತೆಗೆ ಮೂರು ಅರ್ಧಶತಕಗಳನ್ನೂ ಗಳಿಸಿದ್ದಾರೆ.

ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ವೇಗವಾಗಿ ರನ್ ಗಳಿಸುವ ನಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದೆವು.

– ಡಿ.ನಿಶ್ಚಲ್, ಕರ್ನಾಟಕ ತಂಡದ ಆಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.