ಐಪಿಎಲ್ ಜ್ವರ ಆರಂಭವಾಗಿಯೇಬಿಟ್ಟಿದೆ. ಮಾರ್ಚ್ 26ರಂದು ಕ್ರಿಕೆಟ್ ಅಂಗಣ ಕಳೆಗಟ್ಟಲಿದೆ. ಅದಕ್ಕೂ ಮುನ್ನ ಆರ್ಸಿಬಿ ತಂಡಕ್ಕಾಗಿ ಸಂಗೀತಗಾರರು ಆರ್ಸಿಬಿ ಗೀತೆಯೊಂದನ್ನು ರೂಪಿಸಿದ್ದಾರೆ. ಎಲ್ಲ ಪ್ರಕಾರಗಳ ಸಂಗೀತ ಒಳಗೊಂಡ ಫ್ಯೂಷನ್ ಗೀತೆ ಆರ್ಸಿಬಿ ತಂಡ ಅಂಗಣ ಪ್ರವೇಶಿಸುವಾಗ ಮೊಳಗಲಿದೆ.

ಶ್ರೀರಾಮ್ ಗಂಧರ್ವ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದೆ. ‘ಖಂಡಿತವಾಗಿಯೂ ಇದು ಆರ್ಸಿಬಿ ತಂಡಕ್ಕೆ ಹಾಗೂ ಅದರ ನಿಷ್ಠಾವಂತ ಅಭಿಮಾನಿಗಳಿಗೆ ಹೊಸ ಚೈತನ್ಯ ತುಂಬಲಿದೆ’ ಎಂದಿದ್ದಾರೆ ಗಂಧರ್ವ.

‘ಡಿ ಬೀಟ್ಸ್ ಮ್ಯೂಸಿಕ್ ಚಾನೆಲ್ನಲ್ಲಿ ಈ ಹಾಡು ಒಂದೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ’ ಎಂದರು ಅವರು.

ಹಾಡಿನ ಧ್ವನಿಗಳಿವು
ಅನಿರುದ್ಧ್ ಶೆಟ್ಟಿ, ರ್ಯಾಪರ್ ಗುಬ್ಬಿ ಹಾಡಿದ್ದಾರೆ. ಹಾಡಿನಲ್ಲಿ ಆರ್ಸಿಬಿ ತಂಡದ ಸೂಪರ್ ಫ್ಯಾನ್ ಸುಕುಮಾರ್ ಕೂಡಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್ಸಿಬಿ ಗೀತೆಯ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಸುಕುಮಾರ್ ಅವರು ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ಇದೊಂದು ವಿಶೇಷ ಪ್ರಕಟಣೆ, ಇದೀಗ ಬಂದಿದ್ದಾರೆ ಆರ್ಸಿಬಿ ಫ್ಯಾನ್ಸ್...’ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಸುಬಾಶಿನಿ ಶ್ರೀನಿವಾಸ್ ಅವರು ಈ ಹಾಡಿನ ನಿರ್ಮಾಪಕರು. ವಸಂತ ವಿನುತಾ ಅವರು ನಿರ್ದೇಶಕರು.

ಹಾಡಿನ ಪೋಸ್ಟರ್ ಕೂಡಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಶೀಘ್ರವೇ ಕುತೂಹಲಕ್ಕೆ ತೆರೆ ಬೀಳಲಿದೆ ಎನ್ನುತ್ತಾರೆ ಗಂಧರ್ವ.

ಈ ಫೋಟೊದಲ್ಲಿರುವರು ಯಾರು ಬಲ್ಲಿರಾ? ಆ ನಟನ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.