ಶ್ರೀಲಂಕಾ ಎದುರಿನ ಮೂರನೆ ಏಕದಿನ ಕ್ರಿಕೆಟ್‌ ಪಂದ್ಯ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

7
ರೀಜಾ ಹೆನ್ರಿಕ್ಸ್‌ ಅಬ್ಬರದ ಶತಕ

ಶ್ರೀಲಂಕಾ ಎದುರಿನ ಮೂರನೆ ಏಕದಿನ ಕ್ರಿಕೆಟ್‌ ಪಂದ್ಯ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

Published:
Updated:
Deccan Herald

ಪಲ್ಲೆಕೆಲೆ : ಮೂರನೆ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರೀಜಾ ಹೆನ್ರಿಕ್ಸ್‌, ತಾವಾಡಿದ ಚೊಚ್ಚಲ ಏಕದಿನ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿ ಗಮನ ಸೆಳೆದರು.

ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ಮೂರನೆ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 78ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 3–0ರ ಮುನ್ನಡೆ ಗಳಿಸಿತು.

ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 363ರನ್‌ ದಾಖಲಿಸಿತು. ಹೆನ್ರಿಕ್ಸ್‌ 89 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 102ರನ್‌ ಕಲೆಹಾಕಿದರು.

ಗುರಿ ಬೆನ್ನಟ್ಟಿದ ಸಿಂಹಳೀಯ ನಾಡಿನ ತಂಡ 45.2 ಓವರ್‌ಗಳಲ್ಲಿ 285ರನ್‌ಗಳಿಗೆ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರ್‌
ದಕ್ಷಿಣ ಆಫ್ರಿಕಾ:
50 ಓವರ್‌ಗಳಲ್ಲಿ 7 ವಿಕೆಟ್‌ಗೆ 363 (ಹಾಶೀಮ್‌ ಆಮ್ಲಾ 59, ರೀಜಾ ಹೆನ್ರಿಕ್ಸ್‌ 102, ಫಾಫ್‌ ಡು ಪ್ಲೆಸಿ 10, ಜೀನ್‌ ಪಾಲ್‌ ಡುಮಿನಿ 92, ಡೇವಿಡ್‌ ಮಿಲ್ಲರ್‌ 51, ಆ್ಯಂಡಿಲ್‌ ಪೆಹ್ಲುಕವಾಯೊ ಔಟಾಗದೆ 24; ಲಾಹಿರು ಕುಮಾರ 67ಕ್ಕೆ2, ಅಖಿಲ ಧನಂಜಯ 81ಕ್ಕೆ1, ತಿಸಾರ ಪೆರೇರಾ 75ಕ್ಕೆ4).

 ಶ್ರೀಲಂಕಾ: 45.2 ಓವರ್‌ಗಳಲ್ಲಿ 285 (ಉಪುಲ್‌ ತರಂಗ 19, ನಿರೋಷನ್‌ ಡಿಕ್ವೆಲ್ಲಾ 10, ಕುಶಾಲ್‌ ಪೆರೇರಾ 27, ಕುಶಾಲ್‌ ಮೆಂಡಿಸ್‌ 31, ತಿಸಾರ ಪೆರೇರಾ 16, ಏಂಜೆಲೊ ಮ್ಯಾಥ್ಯೂಸ್‌ 32, ಧನಂಜಯ ಡಿ ಸಿಲ್ವ 84, ಅಖಿಲ ಧನಂಜಯ 37, ಸುರಂಗ ಲಕ್ಮಲ್‌ 12; ಲುಂಗಿ ಗಿಡಿ 57ಕ್ಕೆ4, ಆ್ಯಂಡಿಲೆ ಪೆಹ್ಲುಕವಾಯೊ 74ಕ್ಕೆ3, ವಿಲಿಯಂ ಮುಲ್ಡರ್‌ 34ಕ್ಕೆ1, ತಬ್ರೈಜ್‌ ಶಂಸಿ 62ಕ್ಕೆ2).

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 78ರನ್ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 3–0ರಲ್ಲಿ ಮುನ್ನಡೆ.

ಪಂದ್ಯಶ್ರೇಷ್ಠ: ರೀಜಾ ಹೆನ್ರಿಕ್ಸ್‌.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !