ರೋಹಿತ್‌ಗೆ ಇಂದು ಯೋಯೋ ಅಗ್ನಿ ಪರೀಕ್ಷೆ

7

ರೋಹಿತ್‌ಗೆ ಇಂದು ಯೋಯೋ ಅಗ್ನಿ ಪರೀಕ್ಷೆ

Published:
Updated:

ನವದೆಹಲಿ: ಭಾರತ ಏಕದಿನ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು ನಿರ್ಣಾಯಕ ಯೋ ಯೋ ಟೆಸ್ಟ್‌ಗೆ (ಫಿಟ್‌ನೆಸ್‌ ಪರೀಕ್ಷೆ) ಬುಧವಾರ ಒಳಗಾಗಲಿದ್ದಾರೆ. ಬೆಂಗಳೂರಿನ ಎನ್‌ಸಿಎಯಲ್ಲಿ ನಡೆಯುವ ಪರೀಕ್ಷೆಯಲ್ಲಿ ಅವರು ವಿಫಲರಾದರೆ ಅಜಿಂಕ್ಯ ರಹಾನೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.

‘ರಹಾನೆ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿರುವುದು ನಿಜ. ಅದರಲ್ಲಿ ವಿಶೇಷವೇನಿದೆ? ಬದಲಿ ಆಟಗಾರನನ್ನು ಗುರುತಿಸುವುದು ಇದೇ ಮೊದಲು ಅಲ್ಲವಲ್ಲ’ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಹೇಳಿದರು.

‘ರೋಹಿತ್ ಶರ್ಮಾ ಅವರು ಸದ್ಯ ಯಾವುದೇ ಫಿಟ್‌ನೆಸ್ ಸಮಸ್ಯೆಯನ್ನು ಎದುರಿಸುತ್ತಿಲ್ಲ. ಆದ್ದರಿಂದ ಅವರು ವಿಫಲರಾಗುವ ಸಾಧ್ಯತೆ ಕಡಿಮೆ’ ಎಂದು ಕೂಡ ಈ ಪದಾಧಿಕಾರಿ ಹೇಳಿದರು.

ಬೆಂಗಳೂರಿನಲ್ಲಿ ಕಳೆದ ವಾರ ಭಾರತ ಏಕದಿನ ತಂಡದ ಎಲ್ಲ ಆಟಗಾರರು ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗಿದ್ದರು. ರೋಹಿತ್ ಶರ್ಮಾ ರಷ್ಯಾದಲ್ಲಿ ವಾಚ್ ಕಂಪೆನಿಯೊಂದರ ರಾಯಭಾರಿಯಾಗಿ ಹೋಗಲು ಅನುಮತಿ ಕೋರಿದ್ದರಿಂದ ಅವರ ಪರೀಕ್ಷೆಯನ್ನು ನಂತರ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅವರು ಮರಳಿ ಬಂದ ನಂತರ ಪರೀಕ್ಷೆಯ ದಿನವನ್ನು ಅನೇಕ ಬಾರಿ ಬದಲಾಯಿಸಿದ್ದು ಅನುಮಾನಗಳಿಗೆ ಕಾರಣವಾಗಿತ್ತು.

ಮೊಹಮ್ಮದ್ ಶಮಿ, ಅಂಬಟಿ ರಾಯುಡು ಮತ್ತು ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‌ ಅವರು ಈಗಾಗಲೇ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !