ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳಿಗೆ ಹೆಸರಿಟ್ಟ ಕ್ರಿಕೆಟಿಗ ರೋಹಿತ್ ಶರ್ಮಾ

Last Updated 6 ಜನವರಿ 2019, 12:57 IST
ಅಕ್ಷರ ಗಾತ್ರ

ಮುಂಬೈ: ಹೆಣ್ಣು ಮಗುವಿನ ಅಪ್ಪನಾದ ಸಂಭ್ರಮದಲ್ಲಿರುವ ಭಾರತದ ಕ್ರಿಕೆಟಿಗ ರೋಹಿತ್ ಶರ್ಮಾ ತಮ್ಮ ಮಗಳಿಗೆ ಮುದ್ದಾದ ಹೆಸರಿಟ್ಟಿದ್ದಾರೆ.

ಪ್ರೀತಿಯಮಗಳು ಸಮೈರಾ ಎಂದುತಮ್ಮ ಪತ್ನಿ ರಿತಿಕಾ ಅವರ ಮಡಿಲಿನಲ್ಲಿರುವ ಮಗುವನ್ನು ನೋಡುತ್ತಿರುವ ಚಿತ್ರವೊಂದನ್ನುಟ್ವೀಟ್ ಮಾಡಿದ್ದಾರೆ.

‘ನಿನ್ನ ನೆನಪಿನಲ್ಲಿಯೇ ನಾನು ಇಡೀ ರಾತ್ರಿ ಕಳೆದೆ. ನಿನ್ನಹೆಸರಿಗಾಗಿಯೇಸಂಪೂರ್ಣ ಒಂದು ದಿನ ಮೀಸಲಿಟ್ಟೆ’ ಎಂದು ಹೇಳಿರುವ ರೋಹಿತ್,ಇದರ ಜೊತೆಗೆ ಮರೂನ್ 5ತಂಡದ ಕಲಾವಿದರಗರ್ಲ್ಸ್ ಲೈಕ್‌ ಯು ಎಂಬ ಹಾಡಿನ ವಿಡಿಯೊ ಕೂಡ ಟ್ವೀಟಿಸಿದ್ದು, ಈ ಹಾಡಿನಿಂದ ನಾನು ರೋಮಾಂಚಿತನಾಗಿದ್ದಾನೆ ಎಂದಿದ್ದಾರೆ.

ಡಿಸೆಂಬರ್ 31ರಂದು ಮಗು ಜನಿಸಿದ ಸುದ್ದಿ ತಿಳಿದ ರೋಹಿತ್, ಆಸ್ಟ್ರೇಲಿಯಾ ಪ್ರವಾಸ ಕೈಬಿಟ್ಟುಮುಂಬೈಗೆ ಹಿಂದಿರುಗಿದ್ದರು.ಜ.12 ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT