ಕ್ರಿಕೆಟ್: 14 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ದಕ್ಷಿಣ ಆಫ್ರಿಕಾ ತಂಡ

ಕರಾಚಿ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 14 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಮುಂದಿನ ವರ್ಷದ ಜನೆವರಿಯಲ್ಲಿ ಎರಡು ಟೆಸ್ಟ್ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲು ತೆರಳಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಬುಧವಾರ ಈ ವಿಷಯ ತಿಳಿಸಿದೆ.
ಎರಡು ಟೆಸ್ಟ್ ಪಂದ್ಯಗಳು ಕ್ರಮವಾಗಿ ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ನಡೆಯಲಿದ್ದರೆ, ಮೂರು ಟಿ20 ಪಂದ್ಯಗಳು ಲಾಹೋರ್‌ನಲ್ಲಿ ಆಯೋಜನೆಯಾಗಿವೆ.
ದಕ್ಷಿಣ ಆಫ್ರಿಕಾ ತಂಡವು ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿದ್ದು 2007ರಲ್ಲಿ. ಆಗ ಕರಾಚಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 160 ರನ್‌ಗಳಿಂದ ಹರಿಣ ಪಡೆ ಜಯ ಸಾಧಿಸಿತ್ತು. ಅದಾದ ಬಳಿಕ ಉಭಯ ತಂಡಗಳು 2010 ಹಾಗೂ 2013ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಮುಖಾಮುಖಿಯಾಗಿದ್ದವು.
‘ದಕ್ಷಿಣ ಆಫ್ರಿಕಾ ತಂಡವು ಜನೆವರಿ 16ರಂದು ಕರಾಚಿಗೆ ಆಗಮಿಸಲಿದೆ. ಜನೆವರಿ 26ರಿಂದ 30ರವರೆಗೆ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಫೆಬ್ರುವರಿ 4ರಿಂದ 8ರವರೆಗೆ ಎರಡನೇ ಟೆಸ್ಟ್ ರಾವಲ್ಪಿಂಡಿಯಲ್ಲಿ ನಡೆಯಲಿದ್ದು, ಮೂರೂ ಟ್ವೆಂಟಿ–20 ಹಣಾಹಣಿಗಳು ಕ್ರಮವಾಗಿ 11, 13 ಹಾಗೂ 14ರಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ‘ ಎಂದು ಪಿಸಿಬಿ ತಿಳಿಸಿದೆ.
‘ಕರಾಚಿ ತಲುಪಿದ ಬಳಿಕ ಪ್ರವಾಸಿ ತಂಡದ ಆಟಗಾರರು, ಕ್ವಾರಂಟೈನ್ ಅವಧಿ ಪೂರೈಸಬೇಕು. ತರಬೇತಿ ಹಾಗೂ ತಂಡದ ಆಟಗಾರರ ಮಧ್ಯೆಯೇ ಅಭ್ಯಾಸ ಪಂದ್ಯಗಳು ನಡೆಯಲಿವೆ‘ ಎಂದು ಪಿಸಿಬಿ ಹೇಳಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.