ಗುರುವಾರ , ಸೆಪ್ಟೆಂಬರ್ 29, 2022
28 °C

ರಸ್ತೆ ಸುರಕ್ಷತಾ ವಿಶ್ವ ಸರಣಿ ಕ್ರಿಕೆಟ್‌: ಇಂಡಿಯಾ ಲೆಜೆಂಡ್ಸ್‌ಗೆ ಸಚಿನ್ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ರಸ್ತೆ ಸುರಕ್ಷತಾ ವಿಶ್ವ ಸರಣಿ ಕ್ರಿಕೆಟ್‌ನಲ್ಲಿ ಹಾಲಿ ಚಾಂಪಿಯನ್‌ ಇಂಡಿಯಾ ಲೆಜೆಂಡ್ಸ್‌ ತಂಡದ ನಾಯಕತ್ವ ವಹಿಸುವರು. 

ಇದೇ 10ರಿಂದ ಆರಂಭವಾಗಲಿರುವ ಟೂರ್ನಿಯು 22 ದಿನಗಳವರೆಗೆ ನಡೆಯಲಿದೆ. ಬೇರೆ ಬೇರೆ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಕಾನ್ಪುರದಲ್ಲಿ ನಡೆಯುವುದು. ಎರಡು ಸೆಮಿಫೈನಲ್ ಹಾಗೂ ಅ. 1ರಂದು ಫೈನಲ್ ಪಂದ್ಯವನ್ನು ರಾಯಪುರದಲ್ಲಿ ಆಯೋಜಿಸಲಾಗಿದೆ.

ಈ ಬಾರಿ ನ್ಯೂಜಿಲೆಂಡ್ ಲೆಜೆಂಡ್ಸ್‌ ತಂಡವು ಸೇರ್ಪಡೆಗೊಂಡಿದೆ. ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ದೇಶಗಳ ದಿಗ್ಗಜ ಕ್ರಿಕೆಟಿಗರೂ ಈ ಟೂರ್ನಿಯಲ್ಲಿ  ಆಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು