ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಗೆ ಸಾಕ್ಷಿಯೇ ಕ್ಯಾಪ್ಟನ್!

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಭಾರತ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರಸಿಂಗ್ ಧೋನಿ
Last Updated 27 ನವೆಂಬರ್ 2019, 19:06 IST
ಅಕ್ಷರ ಗಾತ್ರ

ಚೆನ್ನೈ : ಕ್ರಿಕೆಟ್‌ ಅಂಗಳದಲ್ಲಿ ‘ಕ್ಯಾಪ್ಟನ್ ಕೂಲ್’ ಆಗಿರುವ ಮಹೇಂದ್ರಸಿಂಗ್ ಧೋನಿ ಆಟ ತಮ್ಮ ಮನೆಯಲ್ಲಿ ನಡೆಯುವುದಿಲ್ಲವಂತೆ. ಅಲ್ಲೇನಿದ್ದರೂ ಅವರ ಪತ್ನಿ ಸಾಕ್ಷಿ ಸಿಂಗ್ ಅವರದ್ದೇ ದರ್ಬಾರಂತೆ!

ಹೌದು; ಸ್ವತಃ ಧೋನಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

‘ಅವಳು (ಸಾಕ್ಷಿ) ಸಂತಸದಿಂದ ಇದ್ದರೆ ಮಾತ್ರ ನಾನು ನೆಮ್ಮದಿಯಿಂದ ಇರಲು ಸಾಧ್ಯ. ಆದ್ದರಿಂದ ಆಕೆಯ ಯಾವ ನಿರ್ಧಾರಕ್ಕೂ ನಾನು ಅಡ್ಡಿಪಡಿಸುವುದಿಲ್ಲ’ ಎಂದು ಧೋನಿ ಹೇಳಿದ್ದಾರೆ.

ಮಂಗಳವಾರ ರಾತ್ರಿ ‘ಭಾರತ್ ಮೆಟ್ರಿಮೋನಿ’ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಎಲ್ಲ ಗಂಡಸರೂ ಮದುವೆಯಾಗುವವರೆಗೆ ಮಾತ್ರ ಸಿಂಹದಂತೆ ಇರುತ್ತಾರೆ’ ಎಂದರು.

‘ನಾನು ಆದರ್ಶವಂತ ಪತಿ. ಪತ್ನಿಗೆ ಎಲ್ಲವನ್ನೂ ಬಿಟ್ಟಿದ್ದೇನೆ. ನಾನು ಎಲ್ಲಿಯವರೆಗೂ ಆಕೆಯ ಎಲ್ಲ ಮಾತುಗಳಿಗೂ ಸಮ್ಮತಿಸುತ್ತೇನೋ ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿರುತ್ತದೆ. ಸಾಕ್ಷಿ ಖುಷಿಯಿಂದ ಇದ್ದರೆ ನನಗೂ ನೆಮ್ಮದಿ ಮತ್ತು ಸಂತಸ ಖಚಿತ’ ಎಂದು ಧೋನಿ ಹೇಳಿದರು.

‘ಬದುಕಿನಲ್ಲಿ ನೀವು ಐವತ್ತು ವರ್ಷ ವಯಸ್ಸು ದಾಟಿದ ನಂತರವೇ ದಾಂಪತ್ಯ ಜೀವನದ ನಿಜವಾದ ಮಜಾ ಇರುತ್ತದೆ. ಆಗಲೇ ನಿಜವಾದ ಪ್ರೀತಿ ಬೆಳೆಯುತ್ತದೆ. ಬಾಂಧವ್ಯ ಹರಳುಗಟ್ಟುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT