ಭಾನುವಾರ, ಜುಲೈ 25, 2021
21 °C

ಕರನ್‌ಗೆ ಕೊರೊನಾ ಸೋಂಕು ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ಶುಕ್ರವಾರ ಖಾತರಿಯಾಗಿದೆ.

ಜ್ವರದ ಲಕ್ಷಣ ಗೋಚರಿಸಿದ್ದರಿಂದ 22 ವರ್ಷದ ಕರನ್‌ ಅವರನ್ನು ಗುರುವಾರ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರು ಹೋಟೆಲ್‌ ಕೊಠಡಿಯಲ್ಲೇ ಸ್ವಯಂ ಪ್ರತ್ಯೇಕವಾಸದಲ್ಲಿದ್ದರು.

‘22 ವರ್ಷ ವಯಸ್ಸಿನ ಕರನ್‌ಗೆ ಕೋವಿಡ್‌ ಇಲ್ಲ ಎಂಬುದು ದೃಢಪಟ್ಟಿದೆ. ಅವರು ಇನ್ನೆರಡು ದಿನಗಳಲ್ಲಿ ಅಭ್ಯಾಸಕ್ಕೆ ಮರಳಲಿದ್ದಾರೆ. ತಂಡದ ವೈದ್ಯರು ಅವರ ಮೇಲೆ ನಿಗಾ ಇಡಲಿದ್ದಾರೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ತಿಳಿಸಿದೆ.

ಕರನ್‌ ಸೇರಿದಂತೆ ಇಂಗ್ಲೆಂಡ್‌ ತಂಡದ ಎಲ್ಲಾ ಆಟಗಾರರು ಭಾನುವಾರ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ಎದುರಿಸಲಿದ್ದಾರೆ. 

ಇದೇ ತಿಂಗಳ ಎಂಟರಿಂದ ನಡೆಯುವ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ಆಂಗ್ಲರ ನಾಡಿನ ತಂಡ ಈಗಾಗಲೇ ಸಿದ್ಧತೆ ಆರಂಭಿಸಿದೆ. 

ಇಂಗ್ಲೆಂಡ್‌ ಆಟಗಾರರೇ ಎರಡು ತಂಡಗಳನ್ನಾಗಿ ಮಾಡಿಕೊಂಡು ಮೂರು ದಿನಗಳ ಅಭ್ಯಾಸ ಪಂದ್ಯ ಆಡಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ಕರನ್‌, ಮೊದಲ ದಿನದಾಟದಲ್ಲಿ ಔಟಾಗದೆ 15ರನ್‌ ಕಲೆಹಾಕಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.