ಶಿಸ್ತಿನಿಂದ ಆಡಿ; ಪಂದ್ಯ ಗೆಲ್ಲಿಸಿ

7
ಆಟಗಾರರಿಗೆ ಭಾರತ ಕ್ರಿಕೆಟ್ ತಂಡದ ಕೋಚ್‌ ರವಿಶಾಸ್ತ್ರಿ ಸೂಚನೆ

ಶಿಸ್ತಿನಿಂದ ಆಡಿ; ಪಂದ್ಯ ಗೆಲ್ಲಿಸಿ

Published:
Updated:
Deccan Herald

ನಾಟಿಂಗಂ: ಇಂಗ್ಲೆಂಡ್‌ ಎದುರಿನ ಮೊದಲ ಎರಡು ಟೆಸ್ಟ್ ಕ್ರಿಕೆಟ್‌ ಪಂದ್ಯಗಳಲ್ಲಿ ಹೀನಾಯವಾಗಿ ಸೋತ ಭಾರತ ತಂಡದ ಆಟಗಾರರು ಮೂರನೇ ಪಂದ್ಯದಲ್ಲಿ ಹೆಚ್ಚು ಶಿಸ್ತಿನಿಂದ ಆಡಬೇಕು’ ಎಂದು ಕೋಚ್‌ ರವಿಶಾಸ್ತ್ರಿ ಸೂಚಿಸಿದ್ದಾರೆ.

‘ಟ್ರೆಂಟ್‌ಬ್ರಿಡ್ಜ್‌ನಲ್ಲಿ ಶನಿವಾರದಿಂದ ನಡೆಯಲಿರುವ ಮೂರನೇ ಪಂದ್ಯದಲ್ಲಿ ಪರಿಸ್ಥಿತಿ ಹೇಗೆಯೇ ಇರಲಿ, ಅದಕ್ಕೆ ಒಗ್ಗಿ ಕೊಂಡು ಮುನ್ನಡೆಯಲು ಪ್ರಯತ್ನಿಸಬೇಕು’ ಎಂದು ಹೇಳಿರುವ ರವಿಶಾಸ್ತ್ರಿ ‘ಕಳೆದೆರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲಿಗೆ ಯಾರನ್ನೂ ವೈಯಕ್ತಿಕವಾಗಿ ದೂರುವುದಿಲ್ಲ. ಆದರೆ ಎಲ್ಲರೂ ಜವಾ ಬ್ದಾರಿ ಅರಿತು ಆಡಬೇಕಾಗಿದೆ’ ಎಂದರು.

‘ಪರಿಸ್ಥಿತಿ ಹೇಗೆ ಇರುತ್ತದೆ ಎಂಬುದ ಕ್ಕಿಂತ, ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದು ಮುಖ್ಯ. ಇದಕ್ಕೆ ಮಾನಸಿಕ ಸ್ಥೈರ್ಯ ಅಗತ್ಯ. ರಹಾನೆ ಅವರಂಥ ಪ್ರಮುಖ ಆಟಗಾರರು ಇಂಥ ಸಂದರ್ಭದಲ್ಲಿ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕಾಗಿದೆ’ ಎಂದು ರವಿಶಾಸ್ತ್ರಿ ನುಡಿದರು.

ಶುಭ ಸೂಚನೆ: ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡ ಗುರು ವಾರ ನಿಟ್ಟುಸಿರು ಬಿಟ್ಟಿದೆ. ವಿರಾಟ್ ಕೊಹ್ಲಿ, ವೇಗಿ ಜಸ್‌ಪ್ರೀತ್ ಬೂಮ್ರಾ, ಆರ್.ಅಶ್ವಿನ್‌ ಮತ್ತು ಹಾರ್ದಿಕ್ ಪಾಂಡ್ಯ ಅವರು ಆಡಲು ಫಿಟ್‌ ಆಗಿದ್ದಾರೆ ಎಂದು ತಂಡದ ಆಡಳಿತ ತಿಳಿಸಿದೆ.

‘ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಪಟ್ಟಕ್ಕೆ ಅರ್ಹರಲ್ಲ’
‘ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್‌ ಪಟ್ಟಕ್ಕೆ ಅರ್ಹತೆ ಪಡೆಯುವಷ್ಟು ಸಾಮರ್ಥ್ಯ ತೋರುತ್ತಿಲ್ಲ’ ಎಂದು ವೆಸ್ಟ್ ಇಂಡೀಸ್‌ನ ಹಿರಿಯ ಕ್ರಿಕೆಟಿಗ ಮೈಕೆಲ್ ಹೋಲ್ಡಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಹಾರ್ದಿಕ್ ಬೌಲಿಂಗ್‌ನಲ್ಲಿ ಪರಿಣಾಮ ಬೀರುತ್ತಿಲ್ಲ. ರನ್‌ ಗಳಿಕೆಯಲ್ಲೂ ನಿರೀಕ್ಷಿತ ಸಾಮರ್ಥ್ಯ ತೋರುತ್ತಿಲ್ಲ’ ಎಂದು ಅವರು ಕ್ರಿಕ್ ಇನ್ಫೊಗೆ ನೀಡಿರುವ ಸಂದರ್ಶನದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆನ್‌ ಸ್ಟೋಕ್ಸ್ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ
ಅಶಿಸ್ತಿನ ವರ್ತನೆಯಿಂದ ವಿಚಾರಣೆಗೆ ಒಳಗಾಗಿ ಆರೋಪಮುಕ್ತವಾಗಿರುವ ಬೆನ್ ಸ್ಟೋಕ್ಸ್ ಅವರನ್ನು ಮುಂದಿನ ಪಂದ್ಯದಲ್ಲಿ ಕಣಕ್ಕೆ ಇಳಿಸಬೇಕೇ ಬೇಡವೇ ಎಂಬುದರ ಬಗ್ಗೆ ಇಂಗ್ಲೆಂಡ್ ತಂಡದ ಆಡಳಿತ ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಸ್ಟೋಕ್ಸ್‌ ಆರೋಪಮುಕ್ತವಾಗಿದ್ದು ಸಂತಸದ ವಿಷಯ. ಆದರೆ ಅವರ ಭವಿಷ್ಯದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಕೋಚ್‌ ಟ್ರೆವರ್ ಬೇಲಿಸ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !