ಬೆಂಗಳೂರು: ಐಪಿಎಲ್ 2025ರ ಪಂದ್ಯಾವಳಿಗೆ ಮುಂಚಿತವಾಗಿ ಚೆಂಡಿಗೆ ಎಂಜಲು ಹಾಕುವುದರ ಮೇಲಿನ ನಿಷೇಧವನ್ನು ತೆಗೆದುಹಾಕಿರುವ ಬಿಸಿಸಿಐ ನಿರ್ಧಾರವನ್ನು ಭಾರತದ ವೇಗಿ ಮೊಹಮ್ಮದ್ ಸಿರಾಜ್ ಗುರುವಾರ ಸ್ವಾಗತಿಸಿದ್ದಾರೆ.

ಇದು ಎಲ್ಲ ಪಿಚ್ಗಳಲ್ಲಿಯೂ ಸಹ ಬೌಲರ್ಗಳು ‘ರಿವರ್ಸ್ ಸ್ವಿಂಗ್’ ಮಾಡಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

ತಂಡಗಳ ಬಹುಪಾಲು ನಾಯಕರು ತಮ್ಮ ಪ್ರಸ್ತಾಪಕ್ಕೆ ಒಪ್ಪಿಕೊಂಡ ನಂತರ ಕ್ರಿಕೆಟ್ ಚೆಂಡಿನ ಮೇಲೆ ಎಂಜಲು ಬಳಕೆಯ ಮೇಲಿನ ನಿಷೇಧವನ್ನು ಬಿಸಿಸಿಐ ತೆಗೆದುಹಾಕಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಉಂಟಾದ ನಿರ್ಬಂಧವನ್ನು ತೆಗೆದುಹಾಕುವ ಮೊದಲ ಪ್ರಮುಖ ಸ್ಪರ್ಧೆಯಾಗಿದೆ.

'ಇದು ಬೌಲರ್ಗಳಿಗೆ ತುಂಬಾ ಒಳ್ಳೆಯದು. ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಚೆಂಡಿನ ಮೇಲೆ ಎಂಜಲು ಹಾಕುವುದರಿಂದ ರಿವರ್ಸ್ ಸ್ವಿಂಗ್ ಮಾಡಬಹುದಾದ ಸಾಧ್ಯತೆಗಳು ಹೆಚ್ಚಾಗುತ್ತವೆ’ಎಂದು ಈ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ಸಿರಾಜ್ ಪಿಟಿಐಗೆ ತಿಳಿಸಿದ್ದಾರೆ.

‘ಚೆಂಡಿಗೆ ಎಂಜಲು ಹಾಕುವುದರಿಂದ ರಿವರ್ಸ್ ಸ್ವಿಂಗ್ಗೆ ಸಹಾಯವಾಗುತ್ತದೆ. ಏಕೆಂದರೆ, ಚೆಂಡನ್ನು ಕೇವಲ ಶರ್ಟ್ಗೆ ಉಜ್ಜುವುದರಿಂದ ಯಾವುದೇ ಅನುಕೂಲ ಆಗುತ್ತಿರಲಿಲ್ಲ’ಎಂದು ಅವರು ಹೇಳಿದ್ದಾರೆ.

ಚೆಂಡಿಗೆ ಎಂಜಲು ಹಾಕುವುದರಿಂದ ಅದರ ಶೈನಿಂಗ್ ಕಾಪಾಡಿಕೊಳ್ಳಬಹುದು. ಇದರಿಂದ ಬೌಲರ್ಗೆ ಅನುಕೂಲವಾಗಲಿದೆ ಎಂದಿದ್ದಾರೆ.
.IPL 2025: ಚೆಂಡಿನ ಮೇಲೆ ಎಂಜಲು ಬಳಕೆ ನಿಷೇಧ ತೆರವುಗೊಳಿಸಿದ ಬಿಸಿಸಿಐ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.