ಬೆಂಗಳೂರು: ಸ್ಮರಣ್ ರವಿಚಂದ್ರನ್ ಅವರಿಗೆ ತಮ್ಮ ಚೊಚ್ಚಲ ರಣಜಿ ಕ್ರಿಕೆಟ್ ಋತು ಅವಿಸ್ಮರಣೀಯವಾಗಿ ಉಳಿಯಲಿದೆ. ತಾವು ಆಡಿದ ಆರನೇ ಪ್ರಥಮ ದರ್ಜೆ ಪಂದ್ಯದಲ್ಲಿಯೇ ದ್ವಿಶತಕ ಗಳಿಸಿದ ಸಾಧನೆಗೆ ಪಾತ್ರರಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಣಜಿ ಟೂರ್ನಿಯ ಆರನೇ ಪಂದ್ಯದ ಎರಡನೇ ದಿನದಾಟದಲ್ಲಿ ಇಡೀ ದಿನ ಸ್ಮರಣ್ ಅವರದ್ದೇ ಆಟ. ಶುಭಮನ್ ಗಿಲ್ ನಾಯಕತ್ವದ ಪಂಜಾಬ್ ತಂಡದವರದ್ದು ಬರೀ ಪರದಾಟವಷ್ಟೇ.

21 ವರ್ಷದ ಸ್ಮರಣ್ (203; 277ಎಸೆತ ) ಅವರ ಚೆಂದದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 122.1 ಓವರ್ಗಳಲ್ಲಿ 475 ರನ್ ಗಳಿಸಿತು. 420 ರನ್ಗಳ ಮುನ್ನಡೆ ಗಳಿಸಿತು.

ದಿನದಾಟದ ಮುಗಿಯುವ ಹೊತ್ತಿಗೆ ಪಂಜಾಬ್ ತಂಡವು 13 ಓವರ್ಗಳಲ್ಲಿ 2 ವಿಕೆಟ್ಗಳಿಗೆ 24 ರನ್ ಗಳಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇವೆ. ಲೆಕ್ಕ ಚುಕ್ತಾ ಮಾಡಲು 396 ರನ್ ಅವಶ್ಯಕತೆ ಇದೆ. ಗಿಲ್ (ಬ್ಯಾಟಿಂಗ್ 7) ಮತ್ತು ಮತ್ತು ಜಸ್ ಇಂದರ್ ಕ್ರೀಸ್ನಲ್ಲಿದ್ದಾರೆ. ಕರ್ನಾಟಕದ ವೇಗಿಗಳಾದ ಅಭಿಲಾಷ್ ಶೆಟ್ಟಿ ಮತ್ತು ಪ್ರಸಿದ್ಧ ಕೃಷ್ಣ ತಲಾ ಒಂದು ವಿಕೆಟ್ ಗಳಿಸಿದ್ದಾರೆ.

ಸ್ಮರಣ್ ಸಾಧನೆ

ಬೆಂಗಳೂರಿನ ಸ್ಮರಣ್ ಅವರು ಗುರುವಾರ ದಿನದಾಟದ ಮುಕ್ತಾಯಕ್ಕೆ 83 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಅವರೊಂದಿಗೆ ಅಭಿನವ್ ಮನೋಹರ್ ಕೂಡ ಇದ್ದರು.

ಎರಡನೇ ದಿನ ಬೆಳಿಗ್ಗೆ ಆಟ ಮುಂದುವರಿಸಿದ ಅವರು ಪಂಜಾಬ್ ಬೌಲರ್ಗಳ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸಿದರು. ಆತ್ಮವಿಶ್ವಾಸದಿಂದ ಬೌಲರ್ಗಳನ್ನು ಎದುರಿಸಿದರು. ತಾವೆದುರಿಸಿದ 120ನೇ ಎಸೆತವನ್ನು ಸಿಕ್ಸರ್ಗೆ ಎತ್ತಿ ಶತಕ ಪೂರೈಸಿದರು. ನಂತರವೂ ಅವರ ರನ್ ಗಳಿಕೆ ಮುಂದುವರಿಯಿತು. ಹೀಗಾಗಿ ಪಂಜಾಬ್ ತಂಡಕ್ಕೆ ಕರ್ನಾಟಕದ ಮೊತ್ತ ಏರುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಸ್ಮರಣ್ ಅವರು 141 ರನ್ ಗಳಿಸಿದ್ದ ಸಂದರ್ಭದಲ್ಲಿ ಸುಖದೀಪ್ ಬಜ್ವಾ ಅವರು ಸುಲಭ ಕ್ಯಾಚ್ ಕೈಬಿಟ್ಟರು. ಇದರಿಂದಾಗಿ ಸ್ಮರಣ್ ದ್ವಿಶತಕದತ್ತ ಸಾಗಲು ಸಾಧ್ಯವಾಯಿತು.

ಸ್ಮರಣ್ ಅವರು ಶುಕ್ರವಾರದ ಆಟದಲ್ಲಿ ಮೂರು ಪ್ರಮುಖ ಜೊತೆಯಾಟಗಳಲ್ಲಿ ಭಾಗಿಯಾದರು. ಅಭಿನವ್ ಜೊತೆ ಐದನೇ ವಿಕೆಟ್ ಜೊತೆಯಾಟದಲ್ಲಿ 86 (140ಎಸೆತ) ರನ್ ಸೇರಿಸಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ ಶ್ರೇಯಸ್ ಗೋಪಾಲ್ ಅವರೊಂದಿಗೆ 75 ರನ್ (114ಎಸೆತ) ಹಾಗೂ 7ನೇ ವಿಕೆಟ್ ಜೊತೆಯಾಟದಲ್ಲಿ ಯಶೋವರ್ಧನ್ ಪರಂತಾಪ್ ಜೊತೆಗೆ 67 ರನ್ (107 ಎಸೆತ) ಸೇರಿಸಿದರು.

ಸ್ಮರಣ್ ಅವರು ದ್ವಿಶತಕದ ಗಡಿ ಮುಟ್ಟಲು ಒಟ್ಟು 270 ಎಸೆತಗಳನ್ನು ಎದುರಿಸಿದರು. 25 ಬೌಂಡರಿ ಮತ್ತು 3 ಸಿಕ್ಸರ್ ಗಳಿಸಿದರು. ಅವರು ಒಟ್ಟು 434 ನಿಮಿಷಗಳಲ್ಲಿ ಈ ಸಾಧನೆ ಮಾಡಿದರು.

ರಣಜಿ ಟೂರ್ನಿಯ ಮೊದಲ ಹಂತದಲ್ಲಿ (ಅಕ್ಟೋಬರ್–ನವೆಂಬರ್) ಸ್ಮರಣ್ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪರದಾಡಿದ್ದರು. ಆದರೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅಮೋಘವಾಗಿ ಆಡಿದ್ದರು. ಹೋದ ಶನಿವಾರ ನಡೆದಿದ್ದ ಫೈನಲ್ನಲ್ಲಿ ವಿದರ್ಭ ಎದುರು ಶತಕ ಗಳಿಸಿದ್ದರು. ಟೂರ್ನಿಯಲ್ಲಿ ಒಟ್ಟು ಎರಡು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಅದೇ ಬ್ಯಾಟಿಂಗ್ ಲಯವನ್ನು ಇಲ್ಲಿಯೂ ಮುಂದುವರಿಸಿದರು. ಚೆಂದದ ಡ್ರೈವ್, ನೇರ ಹೊಡೆತಗಳನ್ನು ಆಡಿದರು. ಆಫ್ಸ್ಟಂಪ್ ಹೊರಗಿನ ಎಸೆತಗಳನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ. ನಿಖರವಾದ ಪಾದಚಲನೆಯ ಮೂಲಕ ಗಮನ ಸೆಳೆದರು.

108ನೇ ಓವರ್ನಲ್ಲಿ ಜಸ್ ಇಂದರ್ ಅವರು ಹಾಕಿದ ಎಸೆತದಲ್ಲಿ ಸ್ಮರಣ್ ಕ್ಲೀನ್ಬೌಲ್ಡ್ ಆದರು. ಅದರೊಂದಿಗೆ ಅವರ ಆಟಕ್ಕೆ ತೆರೆಬಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಂಜಾಬ್: 29 ಓವರ್ಗಳಲ್ಲಿ 55. ಕರ್ನಾಟಕ: 122.1 ಓವರ್ಗಳಲ್ಲಿ 475 (ಸ್ಮರಣ್ ರವಿಚಂದ್ರನ್ 203, ಕೆ.ಎಲ್. ಶ್ರೀಜಿತ್ 26, ಅಭಿನವ್ ಮನೋಹರ್ 34, ಶ್ರೇಯಸ್ ಗೋಪಾಲ್ 31, ಯಶೋವರ್ಧನ್ ಪರಂತಾಪ್ 26, ಪ್ರಸಿದ್ಧ ಎಂ ಕೃಷ್ಣ 30, ವಿ. ಕೌಶಿಕ್ ಔಟಾಗದೇ 10, ಅಭಿಲಾಷ್ ಶೆಟ್ಟಿ 12, ಗುರ್ನೂರು ಬ್ರಾರ್ 125ಕ್ಕೆ2, ಜಸ್ ಇಂದರ್ 66ಕ್ಕೆ3, ಮಯಂಕ್ ಮಾರ್ಕಂಡೆ 53ಕ್ಕೆ3) ಎರಡನೇ ಇನಿಂಗ್ಸ್: ಪಂಜಾಬ್: 13 ಓವರ್ಗಳಲ್ಲಿ 2 ವಿಕೆಟ್ಗಳಿಗೆ 24 (ಅನ್ಮೋಲ್ಪ್ರೀತ್ ಸಿಂಗ್ 14, ಶುಭಮನ್ ಗಿಲ್ ಬ್ಯಾಟಿಂಗ್ 7)

5ನೇ ಬ್ಯಾಟರ್ ಸ್ಮರಣ್

ಣಜಿ ಟ್ರೋಫಿ ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದ ಐದನೇ ಬ್ಯಾಟರ್ ಆರ್. ಸ್ಮರಣ್ ಅವರಾಗಿದ್ದಾರೆ. ಈ ಮೊದಲು ಜಿ.ಆರ್. ವಿಶ್ವನಾಥ್ ರೋಜರ್ ಬಿನ್ನಿ ಸಂಜಯ್ ದೇಸಾಯಿ ಮತ್ತು ಜೆಸ್ವಂತ್ ಅವರು ಈ ಸಾಧನೆ ಮಾಡಿದ್ದಾರೆ ಎಂದು ಅಂಕಿ ಸಂಖ್ಯೆ ತಜ್ಞ ಚನ್ನಗಿರಿ ಕೇಶವಮೂರ್ತಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.