ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲುಸ್ನರ್‌ ಸಹಾಯಕ ಬ್ಯಾಟಿಂಗ್‌ ಕೋಚ್‌

Last Updated 23 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ಹಿರಿಯ ಕ್ರಿಕೆಟಿಗ ಲ್ಯಾನ್ಸ್ ಕ್ಲುಸ್ನರ್‌ ಅವರನ್ನು ದಕ್ಷಿಣ ಆಫ್ರಿಕಾ ತಂಡದ ಸಹಾಯಕ ಬ್ಯಾಟಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ. ಹರಿಣಪಡೆಯು ಟ್ವೆಂಟಿ–20 ಹಾಗೂ ಟೆಸ್ಟ್‌ ಸರಣಿ ಆಡಲು ಸೆಪ್ಟಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ.

ರಾಷ್ಟ್ರೀಯ ತಂಡದ ಹಿರಿಯ ವೇಗಿ ವಿನ್ಸೆಂಟ್‌ ಬರ್ನೆಸ್‌ ಅವರನ್ನು ಸಹಾಯಕ ಬೌಲಿಂಗ್‌ ಕೋಚ್‌ ಆಗಿಯೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ (ಸಿಎಸ್ಎ) ನೇಮಿಸಿದೆ. ಜಸ್ಟಿನ್‌ ಒಂಟಾಂಗ್‌ ಸಹಾಯಕ ಫೀಲ್ಡಿಂಗ್‌ ಕೋಚ್‌ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

‘ತಂಡದ ನೂತನ ರಚನೆಗೆ ಅನುಗುಣವಾಗಿ ತಂಡದ ನಿರ್ದೇಶಕರು ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಮೂವರು ಸಹಾಯಕ ಕೋಚ್‌ಗಳನ್ನು ನೇಮಿಸುತ್ತಾರೆ’. ಈ ಕೋಚ್‌ಗಳು ಸದ್ಯ ಟ್ವೆಂಟಿ–20 ಸರಣಿಗೆ ಮಾತ್ರ ಲಭ್ಯರಿರುವರು’ ಎಂದು ಸಿಎಸ್‌ಎ ಹಂಗಾಮಿ ನಿರ್ದೇಶಕ ಕೊರಿ ವ್ಯಾನ್‌ ಜಿಲ್‌ ತಿಳಿಸಿದ್ದಾರೆ.

ಶ್ರೇಷ್ಠ ಆಲ್‌ರೌಂಡರ್‌ ಆಗಿದ್ದಕ್ಲುಸ್ನರ್‌ ದಕ್ಷಿಣ ಆಫ್ರಿಕಾ ತಂಡದ ಪರ ಟೆಸ್ಟ್‌ ವಿಭಾಗದಲ್ಲಿ 1906 ರನ್‌ ಹಾಗೂ 80 ವಿಕೆಟ್‌ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 3576 ರನ್‌ ಹಾಗೂ 192 ವಿಕೆಟ್‌ ಪಡೆದಿದ್ದಾರೆ.

ಭಾರತ– ದಕ್ಷಿಣ ಆಫ್ರಿಕಾ ನಡುವಣ ಟ್ವೆಂಟಿ–20ಸರಣಿ ಸೆಪ್ಟೆಂಬರ್‌ 15ರಿಂದ ಆರಂಭವಾಗಲಿದೆ. ಆ ಬಳಿಕ ಉಭಯ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT