ಶುಕ್ರವಾರ, ಜನವರಿ 17, 2020
24 °C

ಜಿಂಬಾಬ್ವೆಗೆ ಲಂಕಾ ‘ಟೆಸ್ಟ್’

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ತಂಡ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲು ಗುರುವಾರ ಜಿಂಬಾಬ್ವೆಗೆ ಪ್ರಯಾಣ ಬೆಳೆಸಲಿದೆ. ಆಫ್ರಿಕನ್‌ ರಾಷ್ಟ್ರದ ತಂಡದ ಮೇಲಿನ ನಿಷೇಧವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತೆರವುಗೊಳಿಸಿದ ಬಳಿಕ ಇದೇ ಮೊದಲ ಬಾರಿ ಜಿಂಬಾಬ್ವೆ ಟೆಸ್ಟ್‌ ಪಂದ್ಯ ಆಡಲಿದೆ.

ಹರಾರೆಯಲ್ಲಿ ಕ್ರಮವಾಗಿ ಜನವರಿ 19 ಹಾಗೂ 27ರಂದು ಪಂದ್ಯಗಳು ಆರಂಭಗೊಳ್ಳಲಿವೆ. ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ.

ಜಿಂಬಾಬ್ವೆ ತಂಡ ನವೆಂಬರ್‌ 2018ರಂದು ಕೊನೆಯ ಬಾರಿ ಬಾಂಗ್ಲಾದೇಶ ತಂಡದ ಎದುರು ಟೆಸ್ಟ್‌ ಪಂದ್ಯ ಆಡಿತ್ತು.  ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ಕಾರಣ ನೀಡಿ ಹೋದ ವರ್ಷದ ಜುಲೈ ವೇಳೆ ಐಸಿಸಿ ಆ ತಂಡದ ಮೇಲೆ ನಿಷೇಧ ಹೇರಿತ್ತು. ಮೂರು ತಿಂಗಳ ಬಳಿಕ ನಿಷೇಧ ತೆಗೆದುಹಾಕಲಾಗಿತ್ತು.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು