ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಟಿ20 ರ‍್ಯಾಂಕಿಂಗ್: ಎರಡನೇ ಸ್ಥಾನಕ್ಕೇರಿದ ಸೂರ್ಯಕುಮಾರ್ ಯಾದವ್

ಬ್ಯಾಟಿಂಗ್‌ ಪಟ್ಟಿಯಲ್ಲಿ ಬಡ್ತಿ ಗಳಿಸಿದ ಮುಂಬೈಕರ್
Last Updated 3 ಆಗಸ್ಟ್ 2022, 11:29 IST
ಅಕ್ಷರ ಗಾತ್ರ

ದುಬೈ: ಭಾರತ ತಂಡದ ಸೂರ್ಯಕುಮಾರ್ ಯಾದವ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟಿ20 ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದರು.

ಮಂಗಳವಾರ ವೆಸ್ಟ್ ಇಂಡೀಸ್ ಎದುರಿನ ಚುಟುಕು ಪಂದ್ಯದಲ್ಲಿ ಅವರು ಅರ್ಧಶತಕ ಹೊಡೆದು ಮಿಂಚಿದ್ದರು. ಈ ಮೊದಲು ಐದನೇ ಸ್ಥಾನದಲ್ಲಿದ್ದ ಅವರು ಮೂರು ಸ್ಥಾನಗಳ ಬಡ್ತಿ ಪಡೆದರು. ಅಗ್ರಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಆಜಂ ಇದ್ದಾರೆ. ಸೂರ್ಯ ಖಾತೆಯಲ್ಲಿ 816 ರೇಟಿಂಗ್ ಪಾಯಿಂಟ್ಸ್‌ ಇವೆ. ದಕ್ಷಿಣ ಆಫ್ರಿಕಾದ ರೀಜಾ ಹೆನ್ರಿಕ್ಸ್ 15ನೇ ಸ್ಥಾನಕ್ಕೇರಿದ್ದಾರೆ. ಅವರು ಈಚೆಗೆ ಸತತ ಮೂರು ಪಂದ್ಯಗಳಲ್ಲಿಯೂ ಅರ್ಧಶತಕಗಳನ್ನು ಗಳಿಸಿದ್ದರು.

ಬೌಲಿಂಗ್ ವಿಭಾಗದಲ್ಲಿ ಭಾರತದ ಯಜುವೇಂದ್ರ ಚಾಹಲ್ (16ನೇ) ಮತ್ತು ಶಾರ್ದೂಲ್ ಠಾಕೂರ್ (72ನೇ) ಸ್ಥಾನಗಳಿಗೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT